ಬೆಳಗಾವಿ-೨೩: ಹೋಳಿ.. ಹೋಳಿ.. ರಂಗೇರಿದ ಹೋಳಿ! ಇನ್ನೆರಡು ದಿನಗಳಲ್ಲಿ ಬಣ್ಣ ಬಣ್ಣದ ಹೋಳಿ ಹುಣ್ಣಿಮೆಗೆ ಎಲ್ಲರೂ ಸಜ್ಜಾಗುತ್ತಿದ್ದಾರೆ. ಇರಿಸು-ಮುರಿಸು, ಕೋಪ-ತಾಪ ಎಲ್ಲವನ್ನೂ ಬದಿಗಿಟ್ಟು ಸ್ನೇಹ, ಪ್ರೀತಿಯಿಂದ ಒಬ್ಬರಿಗೊಬ್ಬರು ತರಹೇವಾರಿ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸುವುದಕ್ಕೆ ಕುಂದಾನಗರಿ ಬೆಳಗಾವಿ ಜನರು ಸಜ್ಜಾಗಿದ್ದಾರೆ.
ಹೋಳಿ ಹಬ್ಬಕ್ಕಾಗಿ ಮಕ್ಕಳೂ, ಯುವಕರು, ಯುವತಿಯರು ಎಲ್ಲರೂ ನಗರದ ಮಾರುಕಟ್ಟೆಯಲ್ಲಿ ಬಣ್ಣವನ್ನು ಖರೀದಿ ಮಾಡುವುದಕ್ಕೆ ಮುಗಿಬಿದ್ದಿದ್ದರು. ನಗರದ ಖಡೇಬಜಾರ್, ಮಾರುತಿಗಲ್ಲಿ, ಗಣಮಪತಿಗಲ್ಲಿ, ಪಾಂಗುಳಗಲ್ಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಬಣ್ಣದ ಅಂಗಡಿಗಳಲ್ಲಿ ಬಣ್ಣ ಪ್ರೀಯರು ಬಣ್ಣವನ್ನು ಖರೀದಿ ಮಾಡುವುದರಲ್ಲಿ ಬ್ಯುಸಿಯಾಗಿದ್ದರು.
ಕೆಂಪು, ಕೇಸರು, ಹಸಿರು, ನೀಲಿ, ಗುಲಾಬಿ ಹೀಗೇ ತರಹೇವಾರಿ ಬಣ್ಣ, ಮತ್ತು ಬಣ್ಣಗಳನ್ನು ಎರಚುವುದಕ್ಕೆ ಬಳಸುವ ವಸ್ತುಗಳನ್ನು ಮಕ್ಕಳು ಖರೀದಿಸಿದರು. ಜೊತೆಗೆ ಹೋಳಿ ಆಡುವುದಕ್ಕೆ ಅಂತಲೇ ವಿಶೇಷವಾಗಿ ಬಿಳಿ ಬಟ್ಟೆಗಳನ್ನೂ ಖರೀದಿಸುವುದರಲ್ಲಿ ಯುವಕ, ಯುವತಿಯು ನಿರತರಾಗಿದರು.
ಯುವಕ, ಯುವಕರು, ತರಹೇವಾಗಿ ಬಣ್ಣಗಳನ್ನು ಖರೀದಿಸಿ ಸ್ನೇಹಿತರು, ಆಪ್ತರಿಗೆ ಎರಚುವುದಕ್ಕೆ ಇಡೀ ಬೆಳಗಾವಿ ನಗರದ ಮಾರುಕಟ್ಟೆಯಲ್ಲಿ ಭಾರೀ ಬ್ಯುಸಿಯಾಗಿದ್ದರು.