ಚಾಮರಾಜನಗರ-೧೯:ಲೋಕಸಭಾ ಚುನಾವಣೆ ಜಾರಿಯಾದ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ಇತ್ತೀಚಿಗೆ ನಗರದ ಪ್ರಮುಖ ವೃತ್ತಗಳು, ವಾರ್ಡ್ ನಾ ಪ್ರಮುಖ ಪ್ರಮುಖ ಬೀದಿಗಳ ರಸ್ತೆಯ ಅಕ್ಕ ಪಕ್ಕ ಹಾಕಿರುವ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ವ್ಯಕ್ತಿಗಳಿಗೆ ಸಂಬಂಧ ಪಟ್ಟಂತಹ ಪೋಸ್ಟರ್ ಗಳು, ಗೋಡೆ ಬರಹಗಳು, ಬ್ಯಾನರ್ ಗಳನ್ನ ತೆರವು ಗೊಳಿಸಲು
ಚುನಾವಣಾ ಆಯೋಗವು ಸೂಚಿಸಿರುವುದರಿಂದ ಎಲ್ಲರೂ ಚುನಾವಣೆ ನೀತಿ ಸಂಹಿತೆ ಅದೇಶವನ್ನು ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರಸಭೆ ಪೌರಯುಕ್ತ ರಾಮದಾಸ್ ತಿಳಿಸಿದ್ದಾರೆ.
ಅವರು ಪಟ್ಟಣ ಪ್ರದೇಶದಲ್ಲಿ ರಾಜಕಾರಿಣಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಸಂಬಂದಿಸಿದ ಪ್ಲೆಕ್ಸ್ ಗಳು,ಗೋಡೆ ಬರಹ ಗಳು, ದೊಡ್ಡ ದೊಡ್ಡ ಹೊರ್ಡಿಂಗ್ಸ್ ಗಳು, ಪೋಸ್ಟರ್ ಬ್ಯಾನರ್ ಗಳನ್ನು ತೆರವುಗೊಳಿಸಲು ಸೂಚನೆ ನೀಡಿದರು,
ಈ ಸಂದರ್ಭದಲ್ಲಿ ಆರೋಗ್ಯ ಅಧಿಕಾರಿ ಮಂಜುನಾಥ್, ನಾರಾಯಣ್,ಹಾಗೂ ಆರೋಗ್ಯ ಸಿಬ್ಬಂದಿಗಳಾದ ಮಣಿಕಂಠ, ಅರ್ಫಾಜ್ ಅಹ್ಮದ್,ತನ್ವಿರ್, ಮಂಜು, ರಂಗಸ್ವಾಮಿ, ಚೇತನ್, ಸಿ ಡಿ ವೆಂಕಟೇಶ್ ಹಾಗೂ ಮನೋಹರ ಉಪಸ್ಥಿತಿರಿದ್ದರು.