ಬೆಳಗಾವಿ-೧೯: ಬೆಳಗಾವಿ-02 ಲೋಕಸಭಾ ಚುನಾವಣೆ ಕ್ಷೇತ್ರ,ದ ವ್ಯಾಪ್ತಿಯಲ್ಲಿರುವ ಬೆಳಗಾವಿ ಉತ್ತರ-11 ಹಾಗೂ ಬೆಳಗಾವಿ ದಕ್ಷಿಣ-12 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಸಭೆ, ಸಮಾರಂಭ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಬೇಕಾದಲ್ಲಿ ಪೂರ್ವಾನುಮತಿಯನ್ನು ಪಡೆಯಬೇಕಾಗಿರುವುದು ಕಡ್ಡಾಯವಾಗಿರುತ್ತದೆ.
ಮಾರ್ಚ್ 16, 2024 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಯಾವುದೇ ಕಾರ್ಯಕ್ರಮವನ್ನು ಆಯೋಜಿಸಬೇಕಾದಲ್ಲಿ “SUVIDHA” ವೆಬ್‌ಸೈಟಿನಲ್ಲಿ 48 ಗಂಟೆಯೊಳಗೆ ಆನ್‌ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಲಾಗಿರುತ್ತದೆ.
ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಸಂಬಂಧಪಟ್ಟಂತೆ ಯಾವುದೇ ಕಾರ್ಯಕ್ರಮ ಆಯೋಜಿಸುವ 48 ಗಂಟೆಗಳ ಪೂರ್ವದಲ್ಲಿ ಕಾರ್ಯಕ್ರಮದ ಅನುಮತಿ ಕೋರಿ ಸುವಿಧಾ ವೆಬ್ ಸೈಟ್ https://suvidha.eci.gov.in/pc/public/login ಮುಖಾಂತರ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಬೆಳಗಾವಿ-02 ಲೋಕಸಭಾ ಚುನಾವಣೆ ಕ್ಷೇತ್ರ, ಬೆಳಗಾವಿ-11 ಉತ್ತರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.