ಬೆಳಗಾವಿ-೧೭ಸಂತಿಬಸ್ತವಾಡ ಗ್ರಾಮ ಪಂಚಾಯತನ ಕಾರ್ಯ ಕ್ಷೇತ್ರದ 5 ವಾರ್ಡಗಳಲ್ಲಿ ಹದಿನೈದನೆಯ ಹಣಕಾಸು ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿನ ಕಾಮಗಾರಿಗಳಿಗೆ ಪೂಜೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
15ನೇ ಹನಕಾಸಿನ 30 ಲಕ್ಷ ರೂಪಾಯಿಗಳ ಕಾಮಗಾರಿಗಳು ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ 5 ವಾರ್ಡಗಳಿಗೆ ತಲಾ 10 ಲಕ್ಷ ರೂಪಾಯಿಗಳಂತೆ 50 ಲಕ್ಷ ರೂಪಾಯಿಗಳ ಕಾಮಗಾರಿಗಳು ಮತ್ತು ಸಾರ್ವಜನಿಕ ಸ್ಮಶಾನ ಮತ್ತು ಪರಿಶಿಷ್ಟ ಜಾತಿಯ ಸ್ಮಶಾನ ಅಭಿವೃದ್ಧಿಗೆ 8 ಲಕ್ಷ ರೂಪಾಯಿಗಳ ಕಾಮಗಾರಿಗಳಿಗೆ ಪೂಜೆ ಮಾಡುವುದರೊಂದಿಗೆ ಚಾಲನೆಯನ್ನು ಗ್ರಾಮ ಪಂಚಾಯತ್ ಸಂತಿಬಸ್ತವಾಡದ ವತಿಯಿಂದ ನೀಡಲಾಯಿತು. ಕುಡಿಯುವ ನೀರು, ರಸ್ತೆ, ಚರಂಡಿಗಳು, ಎರೆಹುಳು ಗೊಬ್ಬರ ಘಟಕ, ವಿದ್ಯುತ್ ದೀಪಗಳು ಮುಂತಾದ ಕಾಮಗಾರಿಗಳಿಗೆ ಚಾಲನೆಯನ್ನು ಶಡಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಲಕ್ಷ್ಮೀ ಪರಶುರಾಮ ಚನ್ನಿಕುಪ್ಪಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಮಲ್ಪುರಿ ಕ. ಜಿಡ್ಡಿಮನಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಭರ್ಮಾ ಗುಡಃಂಕೇರಿ, ವಿಠಲ ಅಂಕಲಗಿ,.ಶ್ರೀಮತಿ ಮಹಾದೇವಿ ಬಾಳು ನಾಯಕ, ಸುವರ್ಣ ಅರ್ಜುನ ಅಂಕಲಗಿ, ಪುಷ್ಪಾ ಕಾಂಬಳೆ, ಮಲ್ಪೂರಿ ಕಲ್ಲಪ್ಷಾ ಜಿಡ್ಡಿಮನಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಶಾಮಲಾ ಪೂಜೇರಿ, ಇಂಜಿನಿಯರ ಸಾಗರ ಅಳಗಿ ಮತ್ತು ಗುತ್ತಿಗೆದಾರರು ನೀಲಕಂಠ ಅಳಕುಂಟೆ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.