ಬೆಳಗಾವಿ-೧೭: ಬಿಜೆಪಿ, ರಾಜಕೀಯ ಪಕ್ಷಗಳಲ್ಲಿ ವಿಭಿನ್ನ ಮತ್ತು ಶಿಸ್ತಿನ ಪಕ್ಷವಾಗಿರುವದರಿಂದ ಎರಡು ಸಂಸದರಿಂದ ಮೂರನೂರಾ ಮೂರು ಸಂಸದರನ್ನು 2019 ರ ಲೊಕಸಭೆಯಲ್ಲಿ ಗೆದ್ದರೆ ಈ ಭಾರಿ ನಾಲ್ಕನೂರಕ್ಕು ಅಧಿಕ ಸಂಸದರನ್ನು ಗೆಲ್ಲಿಸುವತ್ತ ನಮ್ಮಚಿತ್ತವಿರಲಿ ಎಂದು ರಾಜ್ಯ ಬಿಜೆಪಿ ಯುವ ಮೊರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ ಹೇಳಿದರು.
ನಗರದ ಆರ್.ಪಿ.ಡಿ.ವೃತ್ತದಲ್ಲಿರುವ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಶುಕ್ರವಾರ ಜರುಗಿದ ಗ್ರಾಮಾಂತರ ಜಿಲ್ಲಾ ಯುವ ಮೊರ್ಚಾದ ನೂತನ ಪದಾಧಿಕಾರಿಗಳ ಪರಿಚಯ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ
12 ಕೋಟಿಗೂ ಅಧಿಕ ಪಕ್ಷದ ಸದಸ್ಯತ್ವ ಪಡೆದ ಬಿಜೆಪಿ ಪಕ್ಷ ಪ್ರಪಂಚದ ಅತ್ಯಂತ ದೊಡ್ಡದಾದ ರಾಜಕೀಯ ಪಕ್ಷವಾಗಿ ಬಿಜೆಪಿ ಬೆಳೆಯುತ್ತಿದೆ. ದೇಶದಲ್ಲಿ ಮೋದಿಯವರ ಆಡಳಿತವನ್ನು ದೇಶದ ಜನತೆಯೆ ಮೆಚ್ಚಿದೆ. ಪ್ರಪಂಚದ ನಾಯಕರಾಗಿ ಹೊರಹೊಮ್ಮಿದ್ದಾರೆ. ಲೊಕಸಭೆಯ ಚುನಾವಣೆಯಲ್ಲಿ ಯುವ ಮೊರ್ಚಾ ಪದಾಧಿಕಾರಿಗಳ ಪಾತ್ರ ಅತ್ಯಂತಮಹತ್ವದ್ದಾಗಿದ್ದು ನಮ್ಮಕ್ಷೇತ್ರದಲ್ಲಿ ಅಭ್ಯರ್ಥಿಯಾರೆ ಆಗಲಿ ನಮ್ಮ ಲಕ್ಷ ಬಿಜೆಪಿ ಗೆಲ್ಲಿಸುವತ್ತ ಮಾತ್ರ ಎಂದರು.
ಯುವಮೊರ್ಚಾ ಪದಾಧಿಕಾರಿಗಳು ದೇಶಕ್ಕಾಗಿ ದೇಶದ ಜನತೆಗಾಗಿ ಸದಾ ಚಟುವಟಿಕೆಗಳಿಂದ ಪಕ್ಷ ಸಂಘಟನೆಯಲ್ಲಿ ನಿರಂತವಾಗಿರುತ್ತದೆ. ಯುವಮೊರ್ಚಾ ಪದಾಧಿಕಾರಿಗಳು ಸಮಾಜದಲ್ಲಿ ಕೈಗೊಳ್ಳುವ ಕಾರ್ಯ, ಜನಸಂಪರ್ಕ, ಪಕ್ಷದ ಇತಿಹಾಸ ಸಾಧನೆ ಹಾಗೂ ಬಿಜೆಪಿ ಸರ್ಕಾರದ ಜನಪರ ಕಾರ್ಯಗಳ ಬಗ್ಗೆ ತಿಳಿದುಕೊಂಡು ಕಾರ್ಯ ನಿರ್ವಹಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಯುವಮೊರ್ಚಾ ಅಧ್ಯಕ್ಷ ಮಹಾಂತೇಶ ಚಿನ್ನಪ್ಪಗೌಡರ ಮಾತನಾಡಿ, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅಂತರಾಷ್ಟ್ರೀಯ ನಾಯಕರಾಗಿ 5ನೂರು ವರ್ಷಗಳ ರಾಮಮಂದಿರ ವಿವಾದ ಕೊನೆಗಾಣಿಸಿ, ದೇಶದ ಜನತೆಗೆ ರಾಮಮಂದಿರ ಸಮರ್ಪಣೆಗೊಲಿಸದರು. ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲಿಸಿದೆ. ಪ್ರಪಂಚದ 3ನೇ ಆರ್ಥಿಕ ಬಲಾಡ್ಯ ರಾಷ್ಟ್ರ ಭಾರತವಾಗಿದ್ದು ರಕ್ಷಣಾ ವ್ಯವಸ್ಥೆಯಲ್ಲಿ ಅದ್ವೀತಿಯ ಸಾಧನೆ ಮಾಡಿರುವ ಹೆಗ್ಗಳಿಕೆ ನರೇಂದ್ರ ಮೊದಿಯವರಿಗೆ ಸಲ್ಲುತ್ತದೆ. ಇದಕ್ಕೆಲ್ಲ ಸಾಮಾನ್ಯ ಕಾರ್ಯಕರ್ತರ ಶ್ರಮ ಮತದಾರರ ಆರ್ಶಿವಾದ ಕಾರಣವಾಗಿದ್ದು ಬರುವ ಲೊಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿಯವರನ್ನ ಪ್ರಧಾನಿ ಮಾಡಿ ಭಾರತವನ್ನು ಜಗದ್ಗುರವನ್ನಾಗಿಸುವ ಸಂಕಲ್ಪ ಮಾಡೋಣ ಎಂದರು.
ಸಂದೀಪ ದೇಶಪಾಂಡೆ, ಶಿವಾನಂದ ಹಣಮಸಾಗರ ಮಾತನಾಡಿದರು.
ವೇದಿಕೆಯ ಮೇಲೆ ಅಕ್ಷಯ ಹಳ್ಯಾಳ ಗುರುಸಿದ್ದಯ್ಯ ಹೀರೆಮಠ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.