ನೇಸರಗಿ-೧೫: ಗ್ರಾಮದ ಮುಖಂಡರು ಹಾಗೂ ಬೈಲಹೊಂಗಲ ತಾಲೂಕ ವಕೀಲರ ಸಂಘದ ಅದ್ಯಕ್ಷರಾದ ಮಲ್ಲಿಕಾರ್ಜುನ ವಾಯ್.ಸೋಮಣ್ಣವರ ಇವರ ಸುಪುತ್ರಿಯಾದ ಕುಮಾರಿ ಮೇಘಾ ಮ.ಸೋಮಣ್ಣವರ ಅವರು ಇತ್ತೀಚೆಗೆ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿ ಗ್ರಾಮದ ಘನತೆ ಹೆಚ್ಚಿಸಿದ ಪ್ರಯುಕ್ತ ಗ್ರಾಮ ಪಂಚಾಯತ್ ಹಾಗೂ ಗ್ರಾಮಸ್ಥರಿಂದ ಶುಕ್ರವಾರದಂದು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ ಪಂ.ಅದ್ಯಕ್ಷರಾದ ನಿಂಗಪ್ಪ ಮಾಳಣ್ಣವರ, ಸದಸ್ಯರಾದ ತೇಜಪ್ಪಗೌಡ ಪಾಟೀಲ, ನಿಂಗಪ್ಪ ತಳವಾರ,ಮಲ್ಲಿಕಾರ್ಜುನ ಸೋಮಣ್ಣವರ, ವೀರಭದ್ರ ಚೋಭಾರಿ, ಪ್ರಕಾಶ ತೋಟಗಿ,ಯಮನಪ್ಪ ಪೂಜೇರಿ, ವಿಷ್ಣು ಮೂಲಿಮನಿ,ದೀಪಾ ಅಗಸಿಮನಿ,ಗೀತಾ ಖಂಡ್ರಿ,ಶೋಭಾ ಮೂಲಿಮನಿ,ಸಿದ್ದವ್ವಾ ಚಿಗರಿ,ಹಾಗೂ ಸಿದ್ದಪ್ಪ ಮದವಾಲ,ಸೋಮಶೇಖರ ಮಾಳಣ್ಣವರ, ಪಕ್ಕೀರಪ್ಪ ಸೋಮಣ್ಣವರ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.