ಬೆಳಗಾವಿ-೧೪:ಕೆಎಲ್‌ಇ ಸಂಸ್ಥೆಯ ಆಸ್ಪತ್ರೆಗೆ ಕೊಟಕ್ ಮಹಿಂದ್ರಾ ಬ್ಯಾಂಕ ಹಾಗೂ ಇಂಪ್ಯಾಕ್ಟ ಗುರು ಫೌಂಡೇಶನ್ ಸಹಯೋಗದೊಂದಿಗೆ ನೀಡಿದ ನೂತನ ಅಂಬ್ಯುಲನ್ಸ ಅನ್ನು ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರಿಂದಿಲ್ಲಿ ಹಸಿರು ನಿಶಾನೆ ತೋರುವದರ ಮೂಲಕ ಜನಸೇವೆಗೆ ಅರ್ಪಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ತುರ್ತು ಆರೋಗ್ಯ ಸೇವೆಯನ್ನು ಕಲ್ಪಿಸುವಲ್ಲಿ ಅಂಬ್ಯುಲನ್ಸ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಸುವರ್ಣ ಘಳಿಗೆಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಕಾರ‍್ಯದಲ್ಲಿ ತೊಡಗಿಕೊಂಡಿದೆ. ಆರೋಗ್ಯ ಸೇವೆಯನ್ನು ಎಲ್ಲರಿಗೂ ತಲುಪಿಸಲು ಸಾಕಷ್ಟು ಯೋಜನೆ ರೂಪಿಸಿದರೂ ಕೂಡ ಕೆಲವು ತುರ್ತು ಸಂದರ್ಭಗಳಲ್ಲಿ ಅಂಬ್ಯುಲನ್ಸ ಆಸ್ಪತ್ರೆಯ ಕಾರ‍್ಯವನ್ನು ಮಾಡುತ್ತದೆ. ಆದ್ದರಿಂದ ತುರ್ತು ಸಂದರ್ಭಗಳಲ್ಲಿ ಅನುಕೂಲವಾಗುವಂತೆ ಸಂಘಸಂಸ್ಥೆಗಳು ಕೈಜೋಡಿಸುವಂತೆ ಕರೆ ನೀಡಿದರು.
ತುರ್ತು ವೈದ್ಯಕೀಯ ಸೇವೆಗಳನ್ನು ಸುಧಾರಿಸಲು ಇಂಪ್ಯಾಕ್ಟ್ ಗುರು ಫೌಂಡೇಶನ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಕೆಎಲ್‌ಇ ಸಂಸ್ಥೆಯ ಆಸ್ಪತ್ರೆಗಳಿಗೆ ಸಹಕಾರ ನೀಡುತ್ತಿವೆ. ಈ ಅತ್ಯಾಧುನಿಕ ಆಂಬ್ಯುಲೆನ್ಸ್ ರೋಗಿಗಳನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ಆದ್ದರಿಂದ ಈ ಅಂಬ್ಯುಲನ್ಸ ಅನ್ನು ಚಿಕ್ಕೋಡಿ ಆಸ್ಪತ್ರೆಗೆ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಹೆರನ ಉಪಕುಲಪತಿ ಡಾ. ನಿತಿನ ಗಂಗಾನೆ, ಡಾ. ವಿ ಡಿ ಪಾಟೀಲ, ಉಪಪ್ರಾಚಾರ್ಯರಾದ ಡಾ. ರಾಜೇಶ ಪವಾರ, ಡಾ. ವಿಶ್ವನಾಥ ಪಟ್ಟಣಶೆಟ್ಟಿ ಕೆಎಲ್‌ಇ ಸಂಸ್ಥೆಯ ಬ್ಯಾಂಕಿಂಗ್ ವ್ಯವಹಾರಗಳ ನಿರ್ದೇಶಕರಾದ ಬಸವರಾಜ ಜೇವರಗಿಕರ, ಕೊಟಕ್ ಮಹಿಂದ್ರಾ ಬ್ಯಾಂಕನ ದಕ್ಷಿಣ ವಿಭಾಗ ಪ್ರಾದೇಶಿಕ ಮುಖ್ಯಸ್ಥರಾದ ಮಧು ಮೊಸೆಸ್, ಬಿಸೆನೆಸ್ ಮ್ಯಾನೇಜರ ರಘುರಾಮ, ಕರ್ನಾಟಕ ವೃತ್ತ ಮುಖ್ಯಸ್ಥರಾದ ರಾಜಾ ಮೊಹಾಂತಿ, ವಿಶಾಲ ಮಾಳಿ, ಲಕ್ಷ್ಮಿಕಾಂತ ಖೊಡೆ, ಮುಜಾಮಿಲ್ ಗುರು ಇಂಪ್ಯಾಕ್ಟ ಫೌಂಡೇಶನನ ಅಶ್ವಿನಿ ಎನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.