ಬೆಳಗಾವಿ-೧೪: ಇತ್ತೀಚೆಗೆ ಇಲ್ಲಿನ ಸಿಪಿಎಡ್ ಮೈದಾನದಲ್ಲಿ ಮಾ.7 ರಿಂದ 11ರವರೆಗೆ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ ಹಾಗೂ ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ವತಿಯಿಂದ ಆಯೋಜಿಸಲಾದ ಕೃಷಿ ಉತ್ಸವದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಾಗೂ ಕಾರ್ಯಕ್ರಮ ಯಶಸ್ವಿ ಮಾಡಿದವರಿಗೆ ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಅಧ್ಯಕ್ಷ ಮಂಜುನಾಥ ಅಳವಣಿ ಸನ್ಮಾನಿಸಿ ಗೌರವಿಸಿದರು.
ಹುಕ್ಕೇರಿಯ ರೈತ ಜಯದೀಪ ಬೆಂಬಳವಾಡಿ, ಸವದತ್ತಿಯ ರೈತರ ದೊಡ್ಡಪ್ಪ ಹೂಲಿ, ಖಾನಾಪುರದ ಮಹಿಳಾ ರೈತ ಸಾವಿತ್ರಿ ಕಡಬಿ ಅವರಿಗೆ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ರೋಟರಿ ಕ್ಲಬ್ ಆಫ್ ಬೆಳಗಾಮ್ ಸೆಂಟ್ರಲ್ ಅಧ್ಯಕ್ಷ ಮಂಜುನಾಥ ಅಳವಣಿ ಗೌರವಿಸಿ ಸತ್ಕರಿಸಿದರು.
ಅಲ್ಲದೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಅಲ್ಲದೆ,ಅತ್ಯುತ್ತಮ ಕೃಷಿ ಮಳಿಗೆ ಪ್ರಶಸ್ತಿ, ಮೆಹಂದಿ ಸ್ಪರ್ಧೆಯಲ್ಲಿ ವಿತೇತರಾದವರಿಗೆ ಹಾಗೂ ಉತ್ತಮ ಅಡುಗೆ ಸ್ಪರ್ಧೆಯ ವಿಜೇತರಿಗೂ ಪ್ರಶಸ್ತಿ ನೀಡಿ ಗೌರವಿಸಿದರು. ಲಕ್ಕಿ ಡ್ರಾ ಕೊಪನ್ ನಲ್ಲಿ ವಿಜೇತರಾದವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೃಷಿ ಉತ್ಸವದ ಯಶಸ್ವಿಯಾಗಲು ಸಹಕರಿಸಿದವರಿಗೆ ಮಂಜುನಾಥ ಅಳವಣಿ ಕೃತಜ್ಞತೆ ತಿಳಿಸಿದ್ದಾರೆ.