ಇಲ್ಲಿಯವರೆಗೆ ಅಂದರೆ ದಿನಾಂಕ: 03-03-2024 ರಿಂದ 11-03-2024 ರ ವರೆಗೆ “UPI” ಮೂಲಕ ಒಟ್ಟು ರೂ.1.70 ಲಕ್ಷ ವಹಿವಾಟು (Transaction)ಗಳಿಂದ ಒಟ್ಟು ರೂ.1.62 ಕೋಟಿ ಮೊತ್ತ ಸಂಗ್ರಹವಾಗಿದ್ದು, ಚಿಕ್ಕೋಡಿ, ಹುಬ್ಬಳ್ಳಿ(ಗ್ರಾ) ಹಾಗೂ ಬಾಗಲಕೋಟೆ ವಿಭಾಗಗಳು ಅನುಕ್ರಮವಾಗಿ ಪ್ರತಿ ದಿನ ಅತೀ ಹೆಚ್ಚು ವಹಿವಾಟು ಮಾಡುತ್ತಿವೆ. ಗೋಕಾಕ, ಹುಬ್ಬಳ್ಳಿ ಗ್ರಾಮಾಂತರ ಘಟಕ-3, ಬೆಳಗಾವಿ 1ನೇ ಘಟಕ , ಹುಬ್ಬಳ್ಳಿ ಗ್ರಾಮಾಂತರ ಘಟಕ-2 ಹಾಗೂ ಮುಧೋಳ ಘಟಕಗಳು ಅನುಕ್ರಮವಾಗಿ ಪ್ರತಿ ದಿನ ಅತೀ ಹೆಚ್ಚು ವಹಿವಾಟು ಮಾಡುವ ಘಟಕಗಳಾಗಿವೆ.
ಪ್ರತಿ ದಿನ ಅತೀ ಹೆಚ್ಚು ವಹಿವಾಟು ಮಾಡಿದ ನಿರ್ವಾಹಕರಿಗೆ ನಗದು ಪುರಸ್ಕಾರ ಮತ್ತು ಪ್ರಶಂಸಾ ಪತ್ರ ನೀಡಿ ಅಭಿನಂದಿಸಿ ಪ್ರೋತ್ಸಾಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲೂ ಸಹ ಇದೇ ರೀತಿ ಅತೀ ಹೆಚ್ಚು ವಹಿವಾಟು ಮಾಡುವ ವಿಭಾಗ, ಘಟಕ ಹಾಗೂ ನಿರ್ವಾಹಕರನ್ನು ಗುರುತಿಸಿ, ಅಭಿನಂದಿಸಿ ಪ್ರೋತ್ಸಾಹಿಸಲಾಗುವುದು ಹಾಗೂ ಸಾರ್ವಜನಿಕ ಪ್ರಯಾಣಿಕರು UPI ಪಾವತಿ ಮೂಲಕ ಟಿಕೇಟು ಪಡೆಯುವ ಸದರಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಭರತ್ ಎಸ್. (ಭಾ.ಆ.ಸೇ), ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.