ಬೆಳಗಾವಿ-೧೨: ನಗರದ ವಿವಿದ್ ಸಂಘಟನೆಗಳಿಂದ ಶಂಕರ್ ಗೌಡ ಪಾಟೀಲ್ ಅವರ ಪರವಾಗಿ ಬೆಳಗಾವಿ ಲೋಕಸಭಾ ಬಿಜೆಪಿ ಟಿಕೆಟ್ ನೀಡುವಂತೆ ಚನ್ನಮ್ಮ ವೃತದಲ್ಲಿ ಸೋಮವಾರದಂದು ಒತ್ತಾಯ ಮಾಡಲಾಯಿತು.
ಹಿರಿಯ ವಕೀಲರಾದ ಚಂದ್ರಕಾಂತ ಮಜ್ಜಿಗೆ ಮಾತನಾಡಿ ಶಂಕರಗೌಡರ ಆದರ್ಶಮಯ ಕಳಂಕರಹಿತ ರಾಜಕೀಯ ಜೀವನ ,ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿ ಯಡಿಯೂರಪ್ಪ ಅವರೊಂದಿಗೆ ಪಕ್ಷ ಸಂಘಟನೆಗೆ ತಳ ಮಟ್ಟದಿಂದ ಪಕ್ಷ ಬೆಳೆಸಿದ್ದಾರೆ ಅದಕ್ಕಾಗಿ ಅವರಿಗೆ ಬೆಳಗಾವಿ ಲೋಕಸಭಾ ಟಿಕೇಟ ನೀಡಿದರೆ ಗೆಲುವು ಖಚಿತ ಎಂದರು.ಮತ್ತು ಅನೇಕ ಮಹನೀಯರು ಶಂಕರಗೌಡ ಪಾಟೀಲ ಅವರಿಗೆ ಟಿಕೇಟ್ ನೀಡುವಂತೆ ಒತ್ತಾಯಿಸಿದರು.
ಈ ಬೆಂಬಲ ಕಾರ್ಯಕ್ರಮದಲ್ಲಿ ಕಾರ್ಮಿಕ ಸಂಘಟನೆ, ವಕೀಲರು, ಜಿಮ್ ಅಸೋಸಿಯೇಷನ್, ನೇಕಾರರ ವೇದಿಕೆ ಮಹಿಳಾ ಸಂಘಟನೆ, ಕುಸ್ತಿ ಸಂಘಟನೆ, ಬಿಲ್ಡರ್ಸ್ ಅಸೋಸಿಯೇಷನ್, ಹಾಗೂ ಹಿರಿಯರಾದ ನಂದಕುಮಾರ ಬೈರಪ್ಪಗೋಳ,ನೀಲಕಂಠ ಮಾಸ್ತಮರ್ಡಿ,ಕಿರಣ ಕವಳೆ,ಭಾಗ್ಯಶ್ರೀ ಬೈರಪ್ಪನವರ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು,ಶಂಕರಗೌಡ ಪಾಟೀಲ ಅಭಿಮಾನಿಗಳು ಉಪಸ್ಥಿತಿರಿದ್ದರು.