ಬೆಳಗಾವಿ-೦೯: ಪಂಚ ಗ್ಯಾರಂಟಿ ಕಾಂಗ್ರೆಸ್ ಸರಕಾರ ಕೇಂದ್ರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ ಹಾಗೂ ರಾಜ್ಯ ಸರಕಾರಕ್ಕೆ ಸಿಗಬೇಕಾದ ಅನುದಾನವನ್ನು ಕೇಂದ್ರ ಸರಕಾರ ಸಮರ್ಪಕವಾಗಿ ನೀಡುತ್ತಾ ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅವರು ಶನಿವಾರ ಹೇಳಿದರು
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ಅನುದಾನ ನೀಡಬೇಕಾದರೆ ಅದರದೇ ಆದ ನೀತಿ ನಿಯಮಗಳಿದ್ದು, ಅದರಂತೆ ರಾಷ್ಟ್ರಪತಿಯವರಿಂದ ರಚನೆಯಾದ ಹಣಕಾಸು ಆಯೋಗ ರಾಜ್ಯ ಸರಕಾರದಿಂದ ಬಂದಂತಹ ತೆರಿಗೆ ಹಣವನ್ನು ರಾಜ್ಯಕ್ಕೆ ಯಾವ ರೀತಿ ಹಂಚಿಕೆ ಮಾಡಬೇಕೆಂಬ ನಿರ್ಧಾರವನ್ನು ಹಣಕಾಸು ಆಯೋಗವೇ ನಿರ್ಧರಿಸುತ್ತಿದೆ. ಹೀಗೆ ಅದರದೆ ಆದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರ ನಿಯಮಾನುಸಾರ ಅನುದಾನ ಕೊಡುತ್ತಿದೆ ಎಂದು ಹೇಳಿದರು.
ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಮನಮೋಹನ್‌ಸಿಂಗ್ ನೇತೃತ್ವದ ಸರಕಾರ 2004ರಿಂದ 2014ರ ಅವಧಿಯಲ್ಲಿ ರಾಜ್ಯಕ್ಕೆ ರೂ.81 ಸಾವಿರ ಕೋಟಿ ಅನುದಾನ ಕೊಟ್ಟಿತ್ತು. ನರೇಂದ್ರ ಮೋದಿ ನೇತೃತ್ವದ ಸರಕಾರ 2014 ರಿಂದ ಈವರೆಗೆ ರೂ.2.85 ಲಕ್ಷ ಕೋಟಿ ಕೊಟ್ಟಿದೆ. ಯುಪಿಎ ಸರಕಾರ ಕ್ಕಿಂತ ದುಪ್ಪಟ್ಟು ಹಣ ಈಗ ಕೊಡಲಾಗಿದೆ. .
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಅನಿಲ ಬೆನಕೆ, ರಾಜ್ಯ ವಕ್ತಾರ ಎಮ್.ಬಿ ಜೀರಲಿ,ಎಸ್ ವಿ ಸಂಕನೂರ,ವಿ,ಪ,ಸದಸ್ಯರು,ಗೀತಾ ಸುತಾರ ಅಧ್ಯಕ್ಷರು ಮಹಾನಗರ,ಅನಿಲ ಬೆನಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷರು,ಮಾಜಿ ಶಾಸಕರು, ರಮೇಶ ದೇಶಪಾಂಡೆ ಪ್ರಭಾರಿ ಮಹಾನಗರ, ಸಿದ್ದನಗೌಡರ ಎಫ್ ಎಸ್ ರಾಜ್ಯ ಮಾದ್ಯಮ ಸಮೀತಿ ಸದಸ್ಯರು,”ಬಿಜೆಪಿ ಮಧ್ಯಮ ಪ್ರಮುಖರು” ಹಾಗೂ ಹಣಮಂತ ಕೊಂಗಾಲಿ ವಕೀಲರು ನಗರ ಸೇವಕರು ರಾಮತೀರ್ಥ ನಗರ & ನಿರ್ದೇಶಕರು ಬುಡಾ ಪ್ರಾಧಿಕಾರ ಸೇರಿದಂತೆ ಇತರರು ಉಪಸ್ಥಿತಿರಿದ್ದರು.