23/12/2024
IMG-20240307-WA0090
IMG 20240221 WA0004 3 -
ನೇಸರಗಿ-07: ದೇಶದ ಪ್ರಗತಿಗೆ ಕಳೆದ ಹತ್ತು ವರ್ಷಗಳ ಕಾಲ ಶ್ರಮಿಸಿ ಭಾರತ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಂಗ ಸ್ಥಾನಕ್ಕೇರಿಸಿ ,270 ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದು ರೈತರ,ವಿದ್ಯಾರ್ಥಿಗಳ,ಕೈಗಾರಿಕೆ,ಆರ್ಥಿಕತೆ ,ಹಿಂದುತ್ವ,ದೇಶಾಭಿಮಾನ  ಬೆಳೆಸಿ ಸ್ವತಂತ್ರ ನಂತರ ದೇಶ ಕಂಡ ಅತ್ಯುತ್ತಮ ಪ್ರಧಾನಿಯಾಗಿ ಹಗಲಿರುಳು ಕೆಲಸ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮೂರನೇ ಬಾರಿ ಬರುವ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಮುಖಾಂತರ ದೇಶದ ಪ್ರಧಾನಿ ಮಾಡಲು ಬಿಜೆಪಿ ಕಾರ್ಯಕರ್ತರು, ದೇಶದ ಜನ ಸಂಕಲ್ಪ ಮಾಡಿದ್ದಾರೆ ಅದನ್ನು ತಪ್ಪಿಸಲು ಯಾರಿಂದಲೂ ಸಾದ್ಯವಿಲ್ಲ ಎಂದು ಕೆನರಾ ಸಂಸದ ಅನಂತಕುಮಾರ ಹೆಗಡೆ ಹೇಳಿದರು.
     ಅವರು ಗುರುವಾರದಂದು ನೇಸರಗಿ ಮಲ್ಲಾಪೂರ ಗ್ರಾಮದ ಶ್ರೀ ಗಾಳೇಶ್ವರ ಮಠದಲ್ಲಿ ನಡೆದ ಬಿಜೆಪಿ ಲೋಕಸಭಾ ಚುನಾವಣಾ ಪೂರ್ವ ಸಭೆಯಲ್ಲಿ ಮಾತನಾಡಿ ಈ ಚೆನ್ನಮ್ಮನ ಕಿತ್ತೂರ ಕ್ಷೇತ್ರದಲ್ಲಿ ಹೆಚ್ಚನ ಮಟ್ಟದ ಕೆಲಸ ಕಾರ್ಯಗಳು ಬಿಜೆಪಿ ಸರ್ಕಾರದ ಅವದಿಯಲ್ಲಿ ಆಗಿದ್ದು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಶ್ರಮ ಅಪಾರವಾಗಿದೆ.ಅದಕ್ಕಾಗಿ ಅವರು,ನಾವು,ನಿಷ್ಠಾವಂತ ಕಾರ್ಯಕರ್ತರ ಶ್ರಮ,ಮೋದಿಜೀ ಅವರ ಅಭಿಮಾನಿಗಳ ನಿರಂತರ ಶ್ರಮದಿಂದ ಮತ್ತೊಮ್ಮೆ ಮೋದಿಜೀ 400 ಎನ ಡಿ ಎ7 ಸಂಸದರ ಪಡೆಯೊಂದಿಗೆ ಪ್ರಧಾನಿಯಾಗಲಿದ್ದಾರೆ ಎಂದರು.
        ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಮಹಾಂತೇಶ ದೊಡ್ಡಗೌಡರ ಮಾತನಾಡಿ ಜಗತ್ತಿನ ಎಲ್ಲ ರಾಷ್ಟ್ರಗಳು ಮೋದಿಜೀಯವರು ಮೂರನೇ ಬಾರಿಗೆ ಪ್ರಧಾನಿಯಾಗಲು ಪ್ರೋತ್ಸಾಹ ನೀಡುತ್ತಿದ್ದಾರೆ. ಹಾಗೇಯೆ 7 ಬಾರಿಗೆ ಸಂಸದ ಅನಂತಕುಮಾರ ಹೆಗಡೆ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದ್ದು ಇಂದಿನಿಂದಲೆ ಬಿಜೆಪಿ ಕಾರ್ಯಕರ್ತರ ,ಅಭಿಮಾನಿಗಳು ಟೊಂಕ ಕಟ್ಟಿ ಬಿಜೆಪಿ ಅಬ್ಯರ್ಥಿ ಅನಂತಕುಮಾರ ಹೆಗಡೆ ಗೆಲುವಿಗೆ ಶ್ರಮಿಸೋಣ ಎಂದರು.
     ಕಾರ್ಯಕ್ರಮದಲ್ಲಿ ನೇಸರಗಿ ಗ್ರಾ ಪಂ ಅದ್ಯಕ್ಷರಾದ ನಿಂಗಪ್ಪ ಮಾಳಣ್ಣವರ,ಮಲ್ಲಾಪೂರ ಗ್ರಾ ಪಂ ಅದ್ಯಕ್ಷ ಅಶೋಕ ವಕ್ಕುಂದ,ಯು ಬಿ.ಉಳವಿ,ಸಂದೀಪ ದೇಶಪಾಂಡೆ,ಬಿ ಎಪ್.ಕೊಳದೂರ, ಮಲ್ಲಿಕಾರ್ಜುನ ತುಬಾಕಿ, ಮಾಹಾಂತೇಶ್ ಕೂಲಿನವರ. ಸಿದ್ದಯ್ಯ ಹಿರೇಮಠ್, ಶ್ರೀಶೈಲ್ ಕಮತಗಿ.ಮಲ್ಲಿಕಾರ್ಜುನ ತುಬಾಕಿ. ರಾಜು ಬುಗಡಿಗಟ್ಟಿ, ತೇಜಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಸೋಮಣ್ಣವರ,ವೀರಭದ್ರ ಚೋಭಾರಿ, ಅಡಿವಪ್ಪ ಚಿಗರಿ,ನೇಸರಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
error: Content is protected !!