ಬೆಳಗಾವಿ-20 : ವಿದ್ಯಾರ್ಥಿಗಳು ಕಾಲೇಜು ಶೀಕ್ಷಣ ಪಡೆಯುವ ಸಂದರ್ಭದಲ್ಲಿ ಉನ್ನತ ಶಿಕ್ಷಣ ಪಡೆಯುವಲ್ಲಿ ಹೆಚ್ಚಿನ ಆಸಕ್ತಿ ಹೊಂದಿರಬೇಕು. ಅದರ ಜೊತೆಗೆ ಉನ್ನತ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡಬೇಕೆಂದು ಲೆಕ್ಕ ಪರಿಶೋಧಕರ ಸಂಘ ಬೆಳಗಾವಿ ವಿಭಾಗದ ಆಧ್ಯಕ್ಷ ಹಗೂ ಖ್ಯಾತ ಲೆಕ್ಕ ಪರಿಶೋಧಕ ಮಡಿವಾಳಪ್ಪ ತಿಗಡಿ ಅವರು ಅಭಿಪ್ರಾಯಪಟ್ಟರು.
ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯ ಜೆ.ಜಿ.ಎನ್.ಡಿ. ಭರತೇಶ ವಾಣಿಜ್ಯ ಮಹಾವಿದ್ಯಾಲಯದ ಎಂ.ಕಾಂ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ “ ಆರಂಭ” ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ಕನಿಷ್ಠ ವಿದ್ಯೆ ಹೊಂದುವುದು ಅಗತ್ಯವಾಗಿದೆ. ಕಾಲಕ್ಕೆ ತಕ್ಕಂತೆ ವಿದ್ಯಾಭ್ಯಾಸ ಮಾಡಿ ಉನ್ನತ ಶೀಕ್ಷಣ ಪಡೆಯಲು ಮುಂದೆ ಬರಬೇಕೆಂದು ಅವರು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ಲೆಕ್ಕಪರಿಶೋಧಕ ಸಂಜಯ ಶಿರಗುಪ್ಪಿ ಅವರು ವಹಿಸಿದ್ದರು. ಪ್ರಾಚಾರ್ಯ ಸುನಿತಾ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಗರ ಹೆಗಡೆ ಅತಿಥಿಗಳನ್ನು ಸ್ವಾಗತಿಸಿದರು.ಕು ಹರ್ಷಾ ಅತಿಥಿಗಳನ್ನು ಪರಿಚಯಿಸಿದರು. ಶಾಲು ಬೇಪಾರಿ ವಂದಿಸಿದರು.