23/12/2024
IMG-20240219-WA0049

ಬೆಳಗಾವಿ-19 : ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ವತಿಯಿಂದ ನೀಡಲಾಗುವ “ಪಾಂಡಪ್ಪ ಲಕ್ಷö್ಮಣ ಹೂಗಾರ ದತ್ತಿ ಪ್ರಶಸ್ತಿ” ಈ ಬಾರಿ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರಿಗೆ ಲಭಿಸಿದೆ.

ಇತ್ತಿಚಿಗೆ ಕಸಾಪ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತನಲ್ಲಿ ಪಾಂಡಪ್ಪ ಲಕ್ಷö್ಮಣ ಹೂಗಾರ ಅವರು ಪೂಜಶ್ರೀ ಶೀವಶರಣೆ ಶಂಕ್ರಮ್ಮ ಹೂಗಾರ ಕಲಾದಗಿ ಇವರ ಸ್ಮರಣಾರ್ಥ “ಪಾಂಡಪ್ಪ  ಲಕ್ಷ್ಮಣ ಹೂಗಾರ ದತ್ತಿ ಪ್ರಶಸ್ತಿಯನ್ನು” ಸ್ಥಾಪಿಸಿದ್ದು, ಶಿಕ್ಷಣ, ಸಮಾಜ ಸೇವೆ, ಶಿವ ಶರಣ ಸಾಹಿತ್ಯದಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ನಗದು ಪ್ರಶಸ್ತಿ ನೀಡಿ ಸನ್ಮಾನಿಸಬೆಕೆಂಬ ದತ್ತಿ ದಾಣಿಗಳ ಆಶಯವಾಗಿದೆ.
ಈ ಹಿನ್ನಲೆಯಲ್ಲಿ 2023 ನೇ ಸಾಲಿನ ಈ ಪ್ರತಿಷ್ಠಿತ ಪ್ರಶಸ್ತಿಗೆ “ ಶರಣ ಸಾಹಿತ್ಯದಲ್ಲಿ ಅನುಪಮ ಸೇವೆ ಸಲ್ಲಿಸಿದ ವಿನೋದ ದೊಡ್ಡಣ್ಣವರ ಅವರನ್ನು ಸರ್ವಾನುಮತದಿಂದ ಸದರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!