23/12/2024
IMG-20240215-WA0003

ಬೆಳಗಾವಿ-15: ರೈತರ ಶ್ರಯೋಭಿವೃದ್ದಿಗಾಗಿ ಜನ್ಮತಾಳಿರುವ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ಗಳಿಗೆ ಕೇಂದ್ರ ಸರ್ಕಾರದ ಸಹಕಾರ ಇಲಾಖೆ ಪುನಶ್ಚೇತನ ಕಾರ್ಯಕ್ರಮ ಹಾಕಿಕೊಂಡಿದ್ದು ಅವುಗಳ ಸದ್ಬಳಿಕೆಗೆ ಆಡಳಿತ ಮಂಡಳಿ ಶ್ರಮಿಸಬೇಕೆಂದು ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು.
ಗೊಮಟೇಶ ವಿದ್ಯಾ ಸಂಸ್ಥೆಯ ಸಭಾಭವನದಲ್ಲಿ ಇತ್ತಿಚ್ಚಿಗೆ ಮಾರಿಹಾಳ ಪಿಕೆಪಿಎಸ್ ಸಂಸ್ಥೆಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಬಿಜೆಪಿ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರಿಗೆ ಹಾಗೂ ಕೃಷಿ ಸಂಬಂಧಿಸಿದ ಕಾರ್ಯಗಳಿಗೆ ಬೇಕಾದ ರಸಗೊಬ್ಬರ, ಕೀಟನಾಶಕ ಕೃಷಿ ಸಾಮಗ್ರಿಗಳು, ದಿನ ನಿತ್ಯದ ದಿನಸಿ, ಬಟ್ಟೆ, ಬಂಗಾರ ಹಾಗೂ ಬಂಕ್ ಗಳನ್ನು ತೆರೆಯಲು ಮತ್ತು ಮುಕ್ತ ವ್ಯಾಪಾರ ಮಾಡಲು ಪಿಕೆಪಿಎಸ್ ಗಳಿಗೆ ಕೇಂದ್ರ ಸರ್ಕಾರ ಅವಕಾಶ ಮಾಟಿಕೊಟ್ಟಿದೆ. ಇದರ ಸದುಪಯೋಗ ಪಡೆದುಕೊಳ್ಳುವತ್ತ ಕಾರ್ಯನ್ಮೊಖವಾಗಬೇಕು. ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಮಾದಮ್ಮನವರ ಅವರ ನೇತೃತ್ವದಲ್ಲಿ ರೈತ ಪರ ಕಾರ್ಯಗಳು ನಡೆಯಲೆಂದರು.
ಮಾಜಿ ಎಪಿಎಂಸಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಕೃಷಿ ಪ್ರಧಾನವಾಗಿರೊ ಮಾರಿಹಾಳ ಗ್ರಾಮದಲ್ಲಿ ಸದಾ ಜನಪರವಾದ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿರುವ ಮಲ್ಲಿಕಾರ್ಜುನ ಮಾದಮ್ಮನವರ ಕಾರ್ಯವನ್ನು ಮೆಚ್ಚಿರುವ ಗ್ರಾಮಸ್ಥರು ಹಾಗೂ ಯುವಕರಲ್ಲಿ ನವಚೇತನಸ ಸೇಲೆ ಮೂಡಿಸುವ ಭರವಸೆ ನಾಯಕನ ನೇತೃತ್ವದಲ್ಲಿ ಮಾರಿಹಾಳ ಪಿಕೆಪಿಎಸ್ ಆದರ್ಶ ಸಂಸ್ಥೆಯಾಗಿ ಬೆಳೆಯಲಿ ಎಂದರು.
ಸತ್ಕಾರ ಸ್ವೀಕರಿಸಿದ ಪಿಕೆಪಿಎಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ಮಾತನಾಡಿ, ಸಂಸ್ಥೆಯ ರೈತ ಸದಸ್ಯರು ನನ್ನ ಮೇಲೆ‌ ವಿಶ್ವಾಸವನ್ನಿಟ್ಟು ಮತ ನೀಡಿ ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದು ಆ ಸ್ಥಾನಕ್ಕೆ ಯಾವುದೆ ಕಪ್ಪು ಚುಕ್ಕೆ ಬಾರದಂತೆ ಸಂಸ್ಥೆಯನ್ನು ಮನ್ನೆಡೆಸುವದರೊಂದಿಗೆ ಕೃಷಿ ಕಾಯಕಕ್ಕೆ ಬೇಕಾದ ಸಾಲ ಸೌಲಭ್ಯ ಹಾಗೂ ಸಂಸ್ಥೆಯ ಎಳಿಗೆಯ ಎಲ್ಲ ಅಭಿವೃದ್ಧಿ ಕಾರ್ಯಗಳ ಮಾಡುತ್ತೆನೆಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಸನತ ಪಾಟೀಲ, ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ನೀತಿನ ಚೌಗಲೆ, ಸಹ ಸಂಚಾಲಕ ಸಂತೋಷ ದೇಶನೂರ, ಮಲ್ಲಿಕಾರ್ಜುನ ಬೋಳೆತ್ತಿನ, ರಾಜೇಶ ಪಾಟೀಲ, ಮೊಹನ ವಕ್ಕುಂದ, ಮುನೀರ ಶೇಖ , ವೀರಭದ್ರ ಪೂಜಾರ, ಅಭಯ ಅವಲಕ್ಕಿ, ಅಕ್ಷಯ ಕಬ್ಬೂರೆ, ಪ್ರದೀಪ ದಿಗ್ಗೆ ಮುಂತಾದವರು ಉಪಸ್ಥಿತಿರಿದ್ದರು

error: Content is protected !!