11/01/2025
IMG-20240214-WA0037

ಬೆಳಗಾವಿ-14: ಮಹಿಖಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಆರ್. ಹೆಬ್ಬಾಳಕರ ಅವರು ತಮ್ಮ ಗೃಹ ಕಛೇರಿಯಲ್ಲಿ ಬುಧವಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವಿವಿಧ ಯೋಜನೆಗಳಡಿ 2023-24ನೇ ಸಾಲಿಗೆ ಆಯ್ಕೆಯಾಗಿರುವ ವಿಕಲಚೇತನ ಫಲಾನುಭವಿಗಳಿಗೆ ಸೌಲಭ್ಯಗಳ ಮಂಜೂರಾತಿ ಆದೇಶ ಪ್ರತಿಗಳನ್ನು ಮತ್ತು ಸೌಲಭ್ಯಗಳನ್ನು ವಿತರಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಬಸವರಾಜು ಎ.ಎಂ., ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್ ಮತ್ತು ಬೆಳಗಾವಿ ತಾಲೂಕಿನ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು.

1) ಅಂಗವಿಕಲತೆ ನಿವಾರಣಾ ಶಸ್ತ್ರಚಿಕಿತ್ಸೆಗಾಗಿ ವೈದ್ಯಕೀಯ ಪರಿಹಾರ ಧನ ಯೋಜನೆ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಫಲಾನುಭವಿ ಆಧಾರಿತ ಯೋಜನೆಗಳಲ್ಲೊಂದಾದ ವೈದ್ಯಕೀಯ ಪರಿಹಾರ ಧನ ಯೋಜನೆಯಡಿ ಅಂಗವಿಕಲತೆ ನಿವಾರಣಾ ಶಸ್ತ್ರ ಚಿಕಿತ್ಸೆಗಾಗಿ ಗರಿಷ್ಠ ರೂ. 1.00 ಲಕ್ಷಗಳ ವರೆಗೆ ಪರಿಹಾರ ಧನ ಒದಗಿಸಲಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ತ ಚಿಕಿತ್ಸೆಗೊಳಗಾದ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಸೌಲಭ್ಯ ಲಭ್ಯವಿಲ್ಲದಿದ್ದಲ್ಲಿ ಸರ್ಕಾರಿ ಆಸ್ಪತ್ರೆಯವರು ಶಿಫಾರಸ್ಸು ಮಾಡುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗೊಳಗಾದ ಫಲಾನುಭವಿಗೆ ಒಟ್ಟಾರೆ ಶಸ್ತ್ರಚಿಕಿತ್ಸೆಗೆ ತಗಲುವ ವೆಚ್ಚಕ್ಕೆ ಗರಿಷ್ಠ ರೂ. 1.00 ಲಕ್ಷಗಳ ವರೆಗೆ ಶಸ್ತçಚಿಕಿತ್ಸೆಯ ಬಿಲ್‌ನ್ನು ಸಂಬಂಧಪಟ್ಟ ಆಸ್ಪತ್ರೆಗೆ ನೇರವಾಗಿ ಪಾವತಿಸಲಾಗುತ್ತಿದೆ.

ಸದರಿ ಯೋಜನೆಯಡಿ ಪ್ರಸಕ್ತ 2023-24ನೇ ಸಾಲಿಗೆ ಬೆಳಗಾವಿ ನಗರದ ಕು. ಪ್ರೇಮಾ ಮಹಾಂತೇಶ ಗೌಳಿ, ವಯಸ್ಸು 07 ವರ್ಷ, ಈ ಬಾಲಕಿಯ ಕಾಲು ಬೆರಳು ಮತ್ತು ಕೈ ಬೆರಳುಗಳು ಒಂದಕ್ಕೊಂದು ಹೊಂದಿಕೊಂಡಿದ್ದು, ಕೆ.ಎಲ್.ಇ. ಆಸ್ಪತ್ರೆಗೆ ದಾಖಲಿಸಿ ಶಸ್ತç ಚಿಕಿತ್ಸೆ ಮಾಡಿಸಲಾಗಿದ್ದು, ಶಸ್ತ್ರಚಿಕಿತ್ಸೆಗೆ ತಗುಲಿರುವ ಒಟ್ಟು ಬಿಲ್ ಮೊತ್ತ ರೂ. 1.35 ಲಕ್ಷ ಇದ್ದು, ಇಲಾಖೆಯಿಂದ ಕೆ.ಎಲ್.ಇ. ಆಸ್ಪತ್ರೆಗೆ ರೂ. 1.00 ಲಕ್ಷ ಸಂದಾಯ ಮಾಡಬೇಕಾಗಿದ್ದು, ಪ್ರಸ್ತುತ ಲಭ್ಯವಿರುವ ರೂ. 50 ಸಾವಿರಗಳನ್ನು ಇಲಾಖೆಯಿಂದ ಕೆ.ಎಲ್.ಇ. ಆಸ್ಪತ್ರೆಗೆ ಸಂದಾಯ ಮಾಡಲಾಗುತ್ತಿದ್ದು, ತದನಂತರ ಬಾಕಿ ಇರುವ ರೂ. 50 ಸಾವಿರಗಳನ್ನು ಸಂದಾಯ ಮಾಡಲಾಗುವುದು.

2) ವಿವಾಹ ಪ್ರೋತ್ಸಾಹಧನ ಯೋಜನೆ :

ಇಲಾಖೆಯ ಫಲಾನುಭವಿ ಆಧಾರಿತ ಯೋಜನೆಯಾದ ವಿವಾಹ ಪ್ರೋತ್ಸಾಹಧನ ಯೋಜನೆಯಡಿ ವಿಕಲಚೇತನ ಯುವಕ ಅಥವಾ ಯುವತಿಯನ್ನು ವಿವಾಹವಾಗುವ ಸಾಮಾನ್ಯ ವ್ಯಕ್ತಿಗೆ ರೂ. 50,000/-ಗಳ ಪ್ರೋತ್ಸಾಹಧನ ಒದಗಿಸಲಾಗುತ್ತಿದೆ. ಸದರಿ ಮಂಜೂರಾದ ಪ್ರೋತ್ಸಾಹಧನವನ್ನು ಫಲಾನುಭವಿಗಳ ಜಂಟಿ ಬ್ಯಾಂಕ್ ಖಾತೆಯಲ್ಲಿ 5 ವರ್ಷಗಳ ಅವಧಿಗೆ ಭದ್ರತಾ ಠೇವಣಿ ಮಾಡಲಾಗುತ್ತದೆ.

ಪ್ರಸಕ್ತ 2023-24ನೇ ಸಾಲಿಗೆ ಬೆಳಗಾವಿ ಜಿಲ್ಲೆಯ ಈ ಕೆಳಕಾಣಿಸಿದ ಮೂವರು ಫಲಾನುಭವಿಗಳಿಗೆ ತಲಾ ರೂ. 50,000/-ಗಳ ವಿವಾಹ ಪ್ರೋತ್ಸಾಹಧನ ಒದಗಿಸಲಾಗುತ್ತಿದೆ.

1) ಸಾಮಾನ್ಯ ವ್ಯಕ್ತಿ – ಶ್ರೀಮತಿ ಲಕ್ಷ್ಮೀ ಮಲ್ಲಪ್ಪ ಗಾಣಗಿ, ಸಾ: ಕೆ. ಕೆ. ಕೊಪ್ಪ
ವಿಕಲಚೇತನ ವ್ಯಕ್ತಿ – ಶ್ರೀ ಪ್ರವೀಣ ಚನ್ನಮಲ್ಲ ತೇಲಿ, ಸಾ: ಬಾಳೇಕುಂದ್ರಿ ಕೆ. ಹೆಚ್.

2) ಸಾಮಾನ್ಯ ವ್ಯಕ್ತಿ – ಶ್ರೀಮತಿ ಸುಶ್ಮಿತಾ ಬಸವರಾಜ ಪಟ್ಟಣಶೆಟ್ಟಿ, ಸಾ: ಬಡಾಲ ಅಂಕಲಗಿ
ವಿಕಲಚೇತನ ವ್ಯಕ್ತಿ – ಶ್ರೀ ನಾಗರಾಜ ಚಂದ್ರಗೌಡ ಪಾಟೀಲ, ಸಾ: ಬಡಾಲ ಅಂಕಲಗಿ

3) ಸಾಮಾನ್ಯ ವ್ಯಕ್ತಿ – ಶ್ರೀಮತಿ ಕಮಲಾ ಭೀಮಪ್ಪ ಪರಸನಟ್ಟಿ, ಸಾ: ಗಿರಿಯಾಲ ಕೆ. ಎ.
ವಿಕಲಚೇತನ ವ್ಯಕ್ತಿ – ಶ್ರೀ ಗುರುನಾಥ ಚಿನ್ನಪ್ಪ ಕೋಲಕಾರ ಸಾ: ತಾರೀಹಾಳ

4) ಶ್ರವಣದೋಷವುಳ್ಳವರಿಗೆ ಹೊಲಿಗೆ ಯಂತ್ರ ಯೋಜನೆ :

ಶ್ರವಣ ದೋಷವುಳ್ಳ ವಿಕಲಚೇತನರಿಗೆ ಸ್ವಂತ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರವನ್ನು ಒದಗಿಸಲಾಗುತ್ತಿದ್ದು, ಪ್ರಸಕ್ತ 2023-24ನೇ ಸಾಲಿಗೆ ಸದರಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿ ಶ್ರೀಮತಿ ಪ್ರಜ್ಞಾ ಎಸ್. ಕೆ. ಸಾ: ಮುತಗಾ ತಾ/ಜಿ: ಬೆಳಗಾವಿ ಇವರಿಗೆ ಹೊಲಿಗೆಯಂತ್ರವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ವಿತರಿಸಿದರು.

error: Content is protected !!