23/12/2024
IMG-20240213-WA0001
ಬೆಳಗಾವಿ-13- ಇದೇ ದಿ. 11 ರಂದು ತಿಲಕಚೌಕ ಹತ್ತಿರವಿರುವ ಲೋಕಮಾನ್ಯ ರಂಗಮಂದಿರದಲ್ಲಿ  ರಂಗಸಂಪದ ತಂಡದವರು ರಾಜೇಂದ್ರ ಕಾರಂತ ರಚನೆಯ ಡಾ. ಅರವಿಂದ ಕುಲಕರ್ಣಿ ನಿರ್ದೇಶನದ ‘ನಾಯಿ ಕಳೆದಿದೆ’ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
ಒಂದು ನಾಯಿಯ ಸುತ್ತ ಹೆಣೆಯಲಾಗಿರುವ ಈ ನಾಟಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಸೊಸೆಗೆ ನಾಯಿಯೆಂದರೆ ಪಂಚಪ್ರಾಣ. ಅತ್ತೆ- ಮಾವನಿಗೆ ಅದೇ ನಾಯಿಯ ಕಂಡರೆ ತಿರಸ್ಕಾರ ಭಾವನೆ. ಹೀಗೆ ಕಥೆ ಮುಂದೆ ಸಾಗುತ್ತದೆ. ಪ್ರೇಕ್ಷಕರನ್ನ ಸೆರೆಹಿಡಿದಿಡುತ್ತದೆ. ಈ ನಾಟಕದಲ್ಲಿ ೯ ಪಾತ್ರಧಾರಿಗಳು ಬರುತ್ತಿದ್ದು ಎಲ್ಲ ಕಲಾವಿದರೂ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಕಲಾವಿದರಾದ  ಶ್ರೀಮತಿ ಪದ್ಮಾ ಕುಲಕರ್ಣಿ ಹಾಗೂ ಶ್ರೀಮತಿ ಸ್ನೇಹಾ ಜೋಶಿಯವರ ಅತ್ತೆ ಸೊಸೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ತಮ್ಮ ನೈಜ ಅಭಿನಯದಿಂದ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು.
ಕಲಾವಿದರಾದ  ನಿರ್ಮಲಾ ಬಟ್ಟಲ, ಸ್ನೇಹಾ ಕುಲಕರ್ಣಿ, ಪ್ರಸಾದ ಕಾರಜೋಳ, ವಿನೋದ ಸಪ್ಪಣ್ಣವರ, ಯೋಗೇಶ ದೇಶಪಾಂಡೆ, ಅಶೋಕ ಕುಲಕರ್ಣಿ, ಆರ್.ವಿ. ಭಟ್, ರಮೇಶ ಬಡಿಗೇರ, ರಾಜವೀರ ಹಿರೇಮಠ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಡಾ. ಅರವಿಂದ ಕುಲಕರ್ಣಿ ಅಧ್ಯಕ್ಷತೆಯಲ್ಲಿ ತುಂಬ ಕ್ರಿಯಾಶೀಲವಾಗಿರುವ ರಂಗಸಂಪದ ತಂಡ, ವೈವಿಧ್ಯಮಯ ನಾಟಕಗಳನ್ನ ನೀಡುತ್ತಲಿದೆ. ಜನರಲ್ಲಿ ನಾಟಕದ‌ ಅಭಿರುಚಿ ಮೂಡಿಸುವಲ್ಲಿ  ಯಶಸ್ವಿಯಾಗಿದೆ.
ಶ್ರೀಮತಿ.ಶ್ವೇತಾ ನರಗುಂದ ದಂಪತಿಗಳು ಜಾಗಟೆ ಬಾರಿಸಿ ನಾಟಕದ ಉದ್ಘಾಟನೆ ನೆರವೇರಿಸಿದರು. ಅಧ್ಯಕ್ಷರಾದ.ಡಾ.ಅರವಿಂದ ಕುಲಕರ್ಣಿ ಮತ್ತು
ಉಪಾಧ್ಯಕ್ಷರಾದ ಗುರುನಾಥ ಕುಲಕರ್ಣಿ ಮತ್ತು.ರಾಮಚಂದ್ರ ಕಟ್ಟಿ ಉದ್ಘಾಟನೆಯ ವೇಳೆ ಉಪಸ್ಥಿತರಿದ್ದರು..
error: Content is protected !!