02/06/2026
IMG-20260601-WA0022

ಬೆಳಗಾವಿ-01 : ತಾಲೂಕಿನ ಬೆನಕನಹಳ್ಳಿ ಪಟ್ಟಣ ಪಂಚಾಯತಿಯ, ಸಿಬ್ಬಂದಿಯಾದ ಯೋಗೇಶ್ ಗಣೇಶಪುರದ ಪೈಪಲೈನ್ ರಸ್ತೆಯ ಬೀದಿ ಬದಿ ವ್ಯಾಪಾರಿಗಳ ಹತ್ತಿರ ನಿಯಮಬಾಹಿರವಾಗಿ ಭೂಬಾಡಿಗೆ ವಸೂಲಿ ಮಾಡಿ ತೊಂದರೆ ನೀಡುತ್ತಿರುವುದನ್ನು ಖಂಡಿಸಿ ಬೀದಿ ಬದಿ ವ್ಯಾಪಾರಿಗಳು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಸೋಮವಾರ ಬೀದಿ ಬದಿ ವ್ಯಾಪಾರಿಗಳುಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ನಮ್ಮಗೆ ಯಾಗುತ್ತಿರುವ ತೊಂದರೆ ಖಂಡಿಸಿ ಪ್ರತಿಭಟಿಸಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಲ್ಲಿಕಾರ್ಜುನ ಕಲಾದಗಿ ಅವರಿಗೆ ಮನವಿ ಸಲ್ಲಿಸಿದರು.
ಬೀದಿ ಬದಿ ವ್ಯಾಪಾರಿಗಳಿಂದ ಮೊದಲು ಹತ್ತು ರೂಪಾಯಿ ಭೂಬಾಡಿಗೆ ಪಡೆಯುತ್ತಿದ್ದ ಸಿಬ್ಬಂದಿಯು (ಯೋಗೇಶ್) ಈಗ ಪ್ರತಿದಿನ 50 ರೂಪಾಯಿ ಕೇಳುತ್ತಿದ್ದಾರೆ. ನಾವು ಕೇವಲ ಸಂಜೆ ಮಾತ್ರ ಅಲ್ಲಿ ವ್ಯಾಪಾರಕ್ಕೆ ಬರುತ್ತೇವೆ, ಐವತ್ತು ರೂಪಾಯಿ ಎಂದರೆ ನಮಗೆ ತೊಂದರೆ ಆಗುತ್ತದೆ, ಎಷ್ಟೋ ಸಲ ನಮ್ಮ ಸಮಸ್ಯೆ ಹೇಳಿದರೂ ಆತ ಕೇಳುವದಿಲ್ಲ ಎಂದು ಅಸಮಾಧಾನವನ್ನು ಹೋರ ಹಾಕಿದರು.
ಹಣ ಕೊಡದಿದ್ದರೆ ಪಂಚಾಯತಿಯಿಂದ ನೋಟಿಸ್ ನೀಡುತ್ತೇವೆ, ನಿಮ್ಮ ಅಂಗಡಿಗಳನ್ನು ಖಾಲಿ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ನಾವು ಹಣ ನೀಡಿದರೂ ಕೂಡಾ ಅದಕ್ಕೆ ಮರಳಿ ಆತ ರಶೀದಿಯನ್ನು ನೀಡುವದಿಲ್ಲ, ಸಂಜೆ ಕೇವಲ ನಾಲ್ಕೈದು ಗಂಟೆ ಅಂಗಡಿ ಹಚ್ಚುವ ಬಡ ಬೀದಿ ಬದಿ ವ್ಯಾಪಾರಿಗಳಿಗೆ ಹೀಗೆ ತೊಂದರೆ ಕೊಟ್ಟರೆ ನಾವುಗಳು ಹೇಗೆ ವ್ಯಾಪಾರ ಮಾಡಿ ನಮ್ಮ ಜೀವನವನ್ನು ಕಟ್ಟಿಕೊಳ್ಳಬೇಕೆಂದು ನಮ್ಮ ಅಳಲೂ ತೊಡಿಕೊಂಡರು.
ವ್ಯಾಪಾರಿಗಳ ಮನವಿಗೆ ಸ್ಪಂದಿಸಿದ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಲ್ಲಿಕಾರ್ಜುನ್ ಕಲಾದಗಿ ಅವರು, ರಶೀದಿ ನೀಡದಿದ್ದರೆ ಯಾವುದೇ ಕಾರಣಕ್ಕೂ ತಾವು ಭೂ ಬಾಡಿಗೆ ನೀಡಬೇಡಿ, ಇದರ ಬಗ್ಗೆ ಬೆನಕನಹಳ್ಳಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳ ಜೊತೆ ಮಾತನಾಡಿ ತಮ್ಮ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುತ್ತೇವೆ ಎಂಬ ಭರವಸೆ ನೀಡಿದರು.
ಈ ವೇಳೆ ಬೆನಕನಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಹಲವಾರು ಬೀದಿ ಬದಿ ವ್ಯಾಪಾರಿಗಳು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!