ಬೆಳಗಾವಿ-16: ಸರ್ಕಾರಿ ಉದ್ಯೋಗದ ಕನಸು ಹೊಂದಿರುವ ಕುರುಬ ಸಮಾಜದ ಹಾಗೂ ಇತರೆ ಅರ್ಹ ಯುವಕ-ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಅನುಕೂಲವಾಗುವಂತೆ ಕನಕಶ್ರೀ ಚಾರಿಟಬಲ್ ಟ್ರಸ್ಟ್ ಹಾಗೂ ಇನ್ಸೈಟ್ಸ್ ಐಎಎಸ್ ಸಹಯೋಗದಲ್ಲಿ ಉಚಿತ ಗ್ರೂಪ್ ‘ಸಿ’ಪರೀಕ್ಷಾ ತರಬೇತಿ ಶಿಬಿರ ಆಯೋಜಿಸಲಾಗಿದೆ.
ಗುರುವಾರ ಬೆಳಗಾವಿ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಪದಾಧಿಕಾರಿಗಳು, ಯಾವುದೇ ಲಾಭಾಪೇಕ್ಷೆಯಿಲ್ಲದೆ ಸಮಾಜ ಸೇವೆಯ ಉದ್ದೇಶದಿಂದ ಗುಣಮಟ್ಟದ ತರಬೇತಿ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷಾ ತರಬೇತಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಶ್ರೀ ವಿನಯ್ ಕುಮಾರ್ ಜಿ.ಬಿ. ಅವರ ಮಾರ್ಗದರ್ಶನದಲ್ಲಿ ತರಬೇತಿ ನಡೆಯಲಿದ್ದು, ಅನುಭವಿ ಬೋಧಕರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಾದ ಸಮಗ್ರ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ತರಬೇತಿಯ ಪ್ರಮುಖ ವಿವರಗಳು: ಕರ್ನಾಟಕ ಸರ್ಕಾರದ ಗ್ರೂಪ್ ‘ಸಿ’ ಹಾಗೂ ಇತರ ಸ್ಪರ್ಧಾತ್ಮಕ ಹುದ್ದೆಗಳ ಪರೀಕ್ಷೆಗಳಿಗೆ ತರಬೇತಿ. 3 ರಿಂದ 3.5 ತಿಂಗಳ ಅವಧಿಯ ಸುದೀರ್ಘ ತರಬೇತಿ. ಕನಕಶ್ರೀ ಸಂಕೀರ್ಣದಲ್ಲಿ ಉಚಿತ ತರಬೇತಿ, ಉಚಿತ ವಸತಿ ಹಾಗೂ ಸುಸಜ್ಜಿತ ಸ್ಟಡಿ ಸೆಂಟರ್ ವ್ಯವಸ್ಥೆ. ಅಭ್ಯರ್ಥಿಗಳ ಊಟೋಪಹಾರದ ವೆಚ್ಚಕ್ಕಾಗಿ ಮಾತ್ರ ಮಾಸಿಕ ರೂ. 6,000 ವಿಧಿಸಲಾಗುವುದು. ತರಬೇತಿ ಶಿಬಿರವು ಶೀಘ್ರದಲ್ಲೇ ಆರಂಭವಾಗಲಿದೆ.
ಅತ್ಯುತ್ತಮ ಮೂಲಸೌಕರ್ಯ ಹಾಗೂ ತಜ್ಞರ ಮಾರ್ಗದರ್ಶನದೊಂದಿಗೆ ನೀಡಲಾಗುತ್ತಿರುವ ಈ ಅವಕಾಶವನ್ನು ಅರ್ಹ ಅಭ್ಯರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಟ್ರಸ್ಟ್ನ ಪ್ರಮುಖರಾದ ಪಿ.ಎನ್. ಕೃಷ್ಣಮೂರ್ತಿ, ವಿ. ಯದು ಹಾಗೂ ಪಿ. ರಂಗಧಾಮಯ್ಯ ಮನವಿ ಮಾಡಿದ್ದಾರೆ.
ಸಂಪರ್ಕಕ್ಕೆ
ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಆಸಕ್ತ ಅಭ್ಯರ್ಥಿಗಳು ಈ ಕೆಳಗಿನವರನ್ನು ಸಂಪರ್ಕಿಸಬಹುದು: ಹೆಚ್ಚಿನ ಮಾಹಿತಿಗಾಗಿ ಪಿ.ಎನ್. ಕೃಷ್ಣಮೂರ್ತಿ, ಕಾರ್ಯದರ್ಶಿ, ಮೊ.ಸಂ. 9483425046, ಎಂ. ಪ್ರಕಾಶ್, 9845101696, ಎಂ. ಮಹಾದೇವ್, 9448514217. ಪಿ. ಗಂಗಾದರಯ್ಯ, ಹಾಗೂ ಬಸವರಾಜ್ 9980804115 ಸಿ. ಬಸವರಾಜು, 9448013559 ಇವರನ್ನು ಸಂಪರ್ಕಿಸಬೇಕೆಂದು ತಿಳಿಸಿದರು.
