17/07/2026
IMG-20260715-WA0044

ಬೆಳಗಾವಿ-16: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲಾ 317ರ ಜಿಲ್ಲಾ ಕ್ಯಾಬಿನೆಟ್ ಪದಗ್ರಹಣ ಸಮಾರಂಭ ಜುಲೈ 18ರಂದು ಬೆಳಗಾವಿಯಲ್ಲಿ ನಡೆಯಲಿದೆ ಎಂದು ಜಿಲ್ಲಾ ಗವರ್ನರ್ ಲಯನ್ ರಾಜಶೇಖರ ಹಿರೇಮಠ ಹೇಳೀದರು.
ಬುಧವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮತ್ತು ಗೋವಾ ರಾಜ್ಯಗಳನ್ನು ಒಳಗೊಂಡ ಜಿಲ್ಲಾ 317ರಲ್ಲಿ 3,862 ಸದಸ್ಯರಿದ್ದು, ಸಮಾರಂಭದಲ್ಲಿ 1,000ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಲಿದ್ದಾರೆ ಎಂದರು. ಅಂತರರಾಷ್ಟ್ರೀಯ ನಿರ್ದೇಶಕ ಲಯನ್ ವಿನಯ್ ಮಿತ್ತಲ್ ಮುಖ್ಯ ಅತಿಥಿಯಾಗಿ ಹಾಗೂ ಪದಗ್ರಹಣಾಧಿಕಾರಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಜಿಲ್ಲಾ 317ರ ನಾಲ್ಕನೇ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾಗಿರುವ ರಾಜಶೇಖರ ಹಿರೇಮಠ ಅವರು ಹಾಂಗ್ ಕಾಂಗ್ನಲ್ಲಿ ಅಧಿಕಾರ ಸ್ವೀಕರಿಸಿದ್ದು, ಇದೀಗ ಜಿಲ್ಲಾ ಕ್ಯಾಬಿನೆಟ್ ಪದಗ್ರಹಣ ಸಮಾರಂಭವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆಯ ಸಮಾಜಮುಖಿ ಸೇವೆಗಳ ಕುರಿತು ಮಾಹಿತಿ ನೀಡಿದ ಅವರು, ಅನ್ನದಾಸೋಹ, ಉಚಿತ ನೇತ್ರ ತಪಾಸಣೆ, ಕುಡಿಯುವ ನೀರಿನ ಯೋಜನೆ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಸಂಸ್ಥೆ ನಿರಂತರವಾಗಿ ನಡೆಸುತ್ತಿದೆ ಎಂದರು.
ಜೊತೆಗೆ, ಮಲ್ಟಿಪಲ್ ಡಿಸ್ಟ್ರಿಕ್ಟ್–317 ವತಿಯಿಂದ ಮೊಬೈಲ್ ರಕ್ತದಾನ ಘಟಕವನ್ನು ಕೊಡುಗೆಯಾಗಿ ನೀಡಲಾಗುತ್ತಿದ್ದು, ಅದು ಜಿಲ್ಲೆಯ ರಕ್ತಸಂಗ್ರಹ ಹಾಗೂ ರಕ್ತ ಬ್ಯಾಂಕ್ ಸೇವೆಗೆ ನೆರವಾಗಲಿದೆ ಎಂದು ತಿಳಿಸಿದರು.
ಈ ವೇಳೆ ಲಯನ್ಸ್ ಕ್ಲಬ್ ನ ಆದ್ಯಕ್ಷರು, ಪದಾಧಿಕಾರಿಗಳು, ಕಾರ್ಯದರ್ಶಿಗಳು, ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!