05/05/2026


ದಿನಾಂಕ 03/05/2026ರ ರಂದು ರಾ ಹ ದೇಶಪಾಂಡೆ ಸಭಾಭವನ, ಕನಾ೯ಟಕ ವಿದ್ಯಾವಧ೯ಕ ಸಂಘ ಧಾರವಾಡದಲ್ಲಿ ಚನ್ನಮ್ಮಾಜಿ ವಂಶಸ್ಥರ ಸಮ್ಮುಖದಲ್ಲಿ ಹಾಗೂ ನಾಡಿನ ಹಿರಿಯ ಸಾಹಿತಿಗಳು, ಇತಿಹಾಸ ತಜ್ಞರು ಹಿರಿಯ ಚಿಂತಕರು ಸಂಶೋಧಕರ ಸಮ್ಮುಖದಲ್ಲಿ ಒಂದು ವಿಶಿಷ್ಟವಾದ ಕಾಯಾ೯ಗಾರ ಜರುಗಿತು. ಈ ಸಂದರ್ಭದಲ್ಲಿ ಕಿತ್ತೂರು ಸಂಸ್ಥಾನ ಕುರಿತು ಪಿಎಚ್. ಡಿ ಪದವಿ ಪಡೆದ ಮೂರು ಜನ ಸಂಶೋಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. 1)ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಶಾಸ್ತ್ರೀಯ ಕನ್ನಡ ಅಧ್ಯಯನ ಸಂಸ್ಥೆಯಿಂದ ಡಾ. ನೀಲಪ್ಪ ಎಸ್ ವಾಲೀಕಾರ “ಕಿತ್ತೂರು ಪರಿಸರದ ಸಾಂಸ್ಕೃತಿಕ ಅಧ್ಯಯನ” ಎಂಬ ವಿಷಯದ ಕುರಿತು 2022ರಲ್ಲಿ ಪದವಿ ಪಡೆದುಕೊಂಡಿದ್ದಾರೆ.2)ಕನಾ೯ಟಕ ವಿಶ್ವವಿದ್ಯಾಲಯ ಧಾರವಾಡದಿಂದ ಡಾ. ಮಲ್ಲಿಕಾರ್ಜುನ ಮಿಂಚ. 2002ರಲ್ಲಿ “Rani kittur channamma :Her Revolt Against the British Rule”. 3)ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಡಾ. ಕೆ ಎನ್. ನರಹರಿ 2013 “ಕಿತ್ತೂರು ಸಂಸ್ಥಾನದ ಆಡಳಿತ ವಿಭಾಗಗಳು” ಎಂಬ ವಿಷಯದ ಕುರಿತು ಮೂರು ಪಿಎಚ್. ಡಿ ಪಡೆದುಕೊಂಡಿದ್ದಾರೆ.
ಈ ಕಾಯಾ೯ಗಾರದಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳು ಸಾಹಿಗಳು ಇತಿಹಾಸ ತಜ್ಞರು ಹಾಗೂ ಚಿಂತಕರನ್ನು ಗುರುತಿಸುವುದಾದರೆ ಡಾ. ಅರವಿಂದ್ ಯಾಳಗಿ ಸರ್.ಶ್ರೀ ಸೋಮಶೇಖರ ದೇಸಾಯಿ, ಶ್ರೀ ಉದಯ ದೇಸಾಯಿ, ಶ್ರೀ ಯುವರಾಜ್ ದೇಸಾಯಿ,ಡಾ. ಕಮಲಾಕ್ಷಿ ಗೋಗಿ ಮೇಡಂ ಡಾ. ಸಂಗಮೇಶ ಕಲ್ಯಾಣಿ ಸರ್, ಡಾ. ಬಾಳಣ್ಣ ಶೀಗಿಹಳ್ಳಿ ಸರ್ ಡಾ. ಎಂ ಆಯ್. ಸಾವಂತ ಡಾ. ಎ ಬಿ ವಗ್ಗರ, ಪ್ರೊ. ಎಸ್ ಸಿ ಪಾಟೀಲ್ ಶ್ರೀ ಮಹೇಶ್ ಚನ್ನಂಗಿ, ಡಾ. ಸಿ ಕೆ ನಾವಲಗಿ, ಪ್ರೊ. ಮಲ್ಲಿಕಾರ್ಜುನ ಪಾಟೀಲ್, ಡಾ. ಎಸ್ ಷಡಕ್ಷರಯ್ಯ, ಪ್ರೊ. ವೀರಣ್ಣ ರಾಜೂರ, ಶ್ರೀ ಸ ರಾ ಸುಳಕೊಡೆ, ಶ್ರೀ ಮಹಾಂತೇಶ ಮೇನಸಿನಕಾಯಿ ಮುಂತಾದ ಮಹನೀಯರು ಸಂಶೋಧಕರು ಅಭಿಮಾನಿ ಆಸಕ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!