04/05/2026

ಮುರಗೋಡಿನ ಸಹಕಾರ ಸಂಘದ ಅಮೃತ ಮಹೋತ್ಸವ ಸಂಭ್ರಮ

ಬೈಲಹೊಂಗಲ-03: ಮುರಗೋಡಿನ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 75ನೇ ವರ್ಷದ ‘ಅಮೃತ ಮಹೋತ್ಸವ’ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.

ಗ್ರಾಮೀಣ ಪ್ರದೇಶಗಳ ಆರ್ಥಿಕತೆಗೆ ಪ್ರಾಥಮಿಕ ಸಹಕಾರ ಸಂಘಗಳೇ ಬೆನ್ನೆಲುಬಾಗಿದ್ದು, ಕಳೆದ 75 ವರ್ಷಗಳಿಂದ ಈ ಸಂಸ್ಥೆಯ ಸೇವೆ ಅನನ್ಯ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕಳೆದ 25 ವರ್ಷಗಳಿಂದ ಸಂಘದ ಅಧ್ಯಕ್ಷರಾಗಿ ಗೀತಾ ದೇಸಾಯಿ ಅವರ ಸೇವೆಯನ್ನು ಶ್ಲಾಘಿಸಿದ ಲಕ್ಷ್ಮೀ ಹೆಬ್ಬಾಳಕರ್, ಪುರುಷ ಪ್ರಧಾನ ಸಮಾಜದಲ್ಲೂ ಮಹಿಳೆಯ ಸಾಧನೆಗೆ ಇದು ಸಾಕ್ಷಿ ಎಂದರು.

ಇದೇ ಸುಸಂದರ್ಭದಲ್ಲಿ ಶ್ರೀಮಂತ ಮಲ್ಲಿಕಾರ್ಜುನ (ಅಣ್ಣಾಸಾಹೇಬ) ವೀರಭದ್ರಪ್ಪ ದೇಸಾಯಿ ಅವರ ಕಂಚಿನ ಪ್ರತಿಮೆಯ ಅನಾವರಣ ಹಾಗೂ ಶ್ರೀಮಂತ ಗೀತಾ ದೇಸಾಯಿ ಅವರ 25 ವರ್ಷಗಳ ಸುದೀರ್ಘ ಸೇವೆಯ ಬೆಳ್ಳಿಹಬ್ಬದ ಕಾರ್ಯಕ್ರಮ ಸಹ ನಡೆಯಿತು.

ಕಾರ್ಯಕ್ರಮದಲ್ಲಿ ಮುರಗೋಡದ ಶ್ರೀ ಮ.ನಿ.ಪ್ರ.ಸ್ವ ದುರದುಂಡೇಶ್ವರ ಮಠದ ಶ್ರೀ ನೀಲಕಂಠ ಮಹಾಸ್ವಾಮಿಗಳು, ಶಿವ ಚಿದಂಬರೇಶ್ವರ ಮಠದ ಶ್ರೀ ದಿವಾಕರದೀಕ್ಷಿತ್ ಮಹಾಸ್ವಾಮಿಗಳು, ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಗೀತಾ ದೇಸಾಯಿ, ಕಾರ್ತಿಕ ಪಾಟೀಲ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮಹಾಂತೇಶ್ ಮತ್ತಿಕೊಪ್ಪ, ನಾಗರಾಜ ದೇಸಾಯಿ, ಅಜಿತ್ ದೇಸಾಯಿ, ವಿನಯಕುಮಾರ ದೇಸಾಯಿ, ಮಹಾಂತೇಶ್ ದೊಡ್ಡಗೌಡರ್, ವಿರೂಪಾಕ್ಷ ಮಾಮನಿ, ಮಹಾಂತೇಶ್ ಕಳ್ಳಿಬಡ್ಡಿ, ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!