
ಬೆಳಗಾವಿ-03 : ನಗರದ ಕಪಿಲೇಶ್ವರ ದೇವಸ್ಥಾನದ ಹಿಂಬಾಗದಲ್ಲಿ ಇರುವ ಕಲ್ಯಾಣಿಯ ಪಕ್ಕದಲ್ಲಿ ಇರುವ ಗೋಡೆ ಕುಶಿದ ರಭಸಕ್ಕೆ, ಇಬ್ಬರು ಬಾಲಕರು ಕಲ್ಯಾಣಿಯಲ್ಲಿ ಮುಳುಗಿ ಮರಣ ಹೊಂದಿರುವ ಹೃದಯ ಹಿಂಡುವ ಘಟನೆ ನಡೆದಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳೀಯರ ಮಾಹಿತಿ ಪ್ರಕಾರ ಭಾನುವಾರ ಮುಂಜಾನೆ 8.30ಕ್ಕೆ ಕಲ್ಯಾಣಿಯ ಪಕ್ಕದ ಗೋಡೆಯ ಮೇಲೆ ನಾಲ್ಕು ಜನ ಬಾಲಕರು ಕುಳಿತು ಮಾತನಾಡುತ್ತಿದ್ದು ಹಳೆಯ ಗೋಡೆ ಆದ್ದರಿಂದ ಒಮಿಂದೊಮ್ಮೆಲೆ ಕುಸಿದು ಕಲ್ಯಾಣಿಯಲ್ಲಿ ಬಿದ್ದಿದೆ, ನಾಲ್ಕೈರಲ್ಲಿ ಇಬ್ಬರು ಈಜಿಕೊಂಡು ಮೇಲೆ ಬಂದಿದ್ದಾರೆ, ಇಬ್ಬರು ಬಾಲಕರು ಗೋಡೆಯ ಕಲ್ಲುಗಳು ಬಡೆದ ಏಟಿಗೆ ಈಜಲಾರದೇ ಅಸು ನಿಗಿರುವ ಹೃದಯ ಹಿಂಡುವ ಅಘಾತಕಾರಿ ಘಟನೆ ನಡೆದಿದೆ.
ಪರಶುರಾಮ ನೀಲಜಕರ ವಯಸ್ಸು 11, ಶಿವಂ ಸುಂಡೀಕರ ವಯಸ್ಸು 9ಎಂಬ ಬಾಲಕರು ಅಸು ನಿಗಿದ್ದು, ಈಗಾಗಲೇ ಒಂದು ಮೃತ ದೇಹವನ್ನು ಕಲ್ಯಾಣಿಯಿಂದ ಹೊರತಗೆದಿದ್ದು, ಮತ್ತೊಂದು ದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳೀಯ ಪೊಲೀಸ್, ಅಗ್ನಿಶಾಮಕ, ಮಹಾನಗರ ಪಾಲಿಕೆ, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಈಜು ನಿಪುನರು ಸ್ಥಳದಲ್ಲಿ ಇದ್ದಾರೆ.
