03/05/2026

ಬೆಳಗಾವಿ-02:1 ಟಾಪ್ 1 ಬೆಸ್ ನಿಯಮದಡಿ ಸೌಂಡ್ ಸಿಸ್ಟಮ್ ಬಳಸಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಬೆಳಗಾವಿ ತಾಲೂಕಿನ ಸೌಂಡ್ ಸಿಸ್ಟಮ್ ಅಸೋಸಿಯೇಷನ್’ ನಿಂದ ಬೆಳಗಾವಿಯ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಶನಿವಾರ ಬೆಳಗಾವಿಯ ಖಾನಾಪೂರ ಸೌಂಡ್ ಸಿಸ್ಟಮ್ ಅಸೋಸಿಯೇಷನ್’ನಿಂದ ಇರ್ಫಾನ್ ತಾಳಿಕೋಟಿ ಅವರ ನೇತೃತ್ವದಲ್ಲಿ ಬೆಳಗಾವಿಯ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಕಳೆದ 10 ವರ್ಷಗಳಿಂದ ಸುಮಾರು 10 ಲಕ್ಷ ರೂಪಾಯಿ ಸಾಲ ಪಡೆದು ಸೌಂಡ್ ಸಿಸ್ಟಮ್ ಖರೀದಿಸಿ ಬಾಡಿಗೆ ನೀಡುವ ವ್ಯವಸಾಯವನ್ನು ಮಾಡುತ್ತಿದ್ದೇವೆ. ಆದರೇ, ಹೈಕೋರ್ಟ್ ಆದೇಶದನ್ವಯ ಅನುಮತಿಯಿಲ್ಲದೇ ಸೌಂಡ್ ಸಿಸ್ಟಮ್ ಬಳಸದಂತೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ. ಅಲ್ಲದೇ ಸಿಸ್ಟಮ್’ಗಳನ್ನು ಸೀಜ್ ಮಾಡಲಾಗುತ್ತಿದೆ. ಇದರಿಂದ ಸೌಂಡ್ ಸಿಸ್ಟಮ್ ವ್ಯವಹಾರವನ್ನೇ ನಂಬಿಕೊಂಡವರು ಬೀದಿಗೆ ಬರುವಂತಾಗಿದೆ. ಆದಾಯಕ್ಕಿಂತ ಹೆಚ್ಚಿನ ದಂಡ ವಿಧಿಸುತ್ತಿರುವುದು ಆರ್ಥಿಕ ಹೊರೆಯಾಗುತ್ತಿದೆ ಎಂದು ಕಾರ್ತಿಕ್ ಖಾನಾಪೂರೆ ಅವರು ಹೇಳಿದರು.

ಇನ್ನು ಇರ್ಫಾನ್ ತಾಳಿಕೋಟಿ ಅವರು ಖಾನಾಪೂರ ಸೌಂಡ್ ಅಸೋಸಿಯೇಷನ್’ನವರು ತಮ್ಮ ನೋವನ್ನು ನಮ್ಮ ಮುಂದೆ ತೋಡಿಕೊಂಡ ಹಿನ್ನೆಲೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲು ಬಂದಿದ್ದು, 1 ಟಾಪ್ 1 ಬೆಸ್ ನಿಯಮದಡಿ ಆದರೂ ಅನುಮತಿ ನೀಡಬೇಕೆಂದು ಆಗ್ರಹಿಸಿದರು.

ಈ ವೇಳೆ ಖಾನಾಪೂರ ಸೌಂಡ್ ಸಿಸ್ಟಮ್ ಅಸೋಸಿಯೇಷನ್’ನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

l

Leave a Reply

Your email address will not be published. Required fields are marked *

error: Content is protected !!