10/03/2026
IMG-20260309-WA0015

ಬೆಳಗಾವಿ-09: ಬೆಳಗಾವಿ ಯ ಶಹಾಪೂರದ ರಂಗಪಂಚಮಿಯ ಸಡಗರ ಮುಗಿಲು ಮುಟ್ಟಿದೆ. ಶಹಾಪುರ, ಖಾಸಬಾಗ ಹಾಗೂ ವಡಗಾಂವ್ ಭಾಗದ ಗಲ್ಲಿ ಗಲ್ಲಿಗಳಲ್ಲಿ ಯುವಕ-ಯುವತಿಯರು ಬಣ್ಣದ ಓಕುಳಿಯಲ್ಲಿ ಮಿಂದೆದ್ದಿದ್ದು, ವಿವಿಧ ಕಾಲಕೃತಿಗಳ ಅಣುಕು ಶವಯಾತ್ರೆ ಹಾಗೂ ರೇನ್ ಡ್ಯಾನ್ಸ್ ಮಾಡುವ ಮೂಲಕ ಕುಂದಾನಗರಿ ಜನತೆಯು ಹೋಳಿ ಹಬ್ಬಕ್ಕೆ ಅದ್ದೂರುಯಾಗಿ ಆಚರಿಸಿದರು.
ರವಿವಾರ ಶಹಾಪುರದಲ್ಲಿ ಬಣ್ಣದ ಹಬ್ಬದ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿತು, ಯುವಕರು-ಯುವತಿಯರು ಹಾಗೂ ಪುಟಾಣಿಗಳು ಬಣ್ಣದ ನೀರು ಎರಚುತ್ತಾ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಡೀಜೆ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ರೇನ್ ಡ್ಯಾನ್ಸ್ ನಲ್ಲಿ ಮಿಂದೇಳುತ್ತಾ ಯುವ ಸಮೂಹ ಸಂಭ್ರಮಿಸಿದರು. ವಿವಿಧ ವಿಚಿತ್ರ ವೇಷಭೂಷಣಗಳನ್ನು ತೊಟ್ಟ ಯುವಕರು ಎಲ್ಲರ ಗಮನ ಸೆಳೆದರೆ, ಸುಡು ಬಿಸಿಲಿನಲ್ಲೂ ಬಣ್ಣಗಳ ಲೋಕದಲ್ಲಿ ಎಲ್ಲರೂ ತಲ್ಲೀನರಾಗಿದ್ದರು.
ಶಹಾಪುರದ ಹೋಳಿ ಆಚರಣೆಯ ಪ್ರಮುಖ ಆಕರ್ಷಣೆಯಾದ ʼಅಣುಕು ಶವಯಾತ್ರೆ’ ಈ ಬಾರಿಯೂ ಸಾವಿರಾರು ಜನರನ್ನು ಆಕರ್ಷಿಸಿತು. ಶಹಾಪುರ ಸೇರಿದಂತೆ ಖಾಸಬಾಗ ಮತ್ತು ವಡಗಾಂವನ ಗಲ್ಲಿಗಳಲ್ಲಿ ಜನರು ತಂಡೋಪತಂಡವಾಗಿ ಬಂದು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು.
ಹಬ್ಬದ ಆಚರಣೆಯ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಾಗಿತು. ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರು ಸ್ವತಃ ಸ್ಥಳಕ್ಕೆ ಭೇಟಿ ನೀಡಿ, ಬಂದೋಬಸ್ತ್ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಆಯುಕ್ತರು ಸೂಚನೆ ನೀಡಿದರು. ಇಡೀ ದಿನ ಬೆಳಗಾವಿ ನಗರ ಬಣ್ಣದ ಲೋಕದಲ್ಲಿ ಮಿಂದೆದು, ಸೌಹಾರ್ವತೆಯ ಪ್ರತೀಕವಾಗಿ ರಂಗೋತ್ಸವವನ್ನು ಆಚರಿಸಿದರು.

Leave a Reply

Your email address will not be published. Required fields are marked *

error: Content is protected !!