ಬೆಳಗಾವಿ-06:ಬೆಳಗಾವಿಯ ಅನಗೋಳ್ ಪ್ರದೇಶದ ರಾಜಹಂಸ ಗಲ್ಲಿಯಲ್ಲಿ ಆಯೋಜಿಸಲಾಗಿದ್ದ ಹೋಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಬೇರೆ ರಾಜ್ಯ ಓಲೈಸುವ ಉದ್ದೇಶದಿಂದ ‘ಜೈ ಜೈ ಮಹಾರಾಷ್ಟ್ರ ಮಾಜಾ’ ಎಂಬ ಹಾಡನ್ನು ಹಾಕಿ ಕುಣಿಯಲಾಗಿತ್ತು. ಈ ಕೃತ್ಯವು ಕನ್ನಡಿಗರ ಮತ್ತು ಸಾರ್ವಜನಿಕರ ಭಾವನೆಗಳಿಗೆ ಧಕ್ಕೆ ತಂದಿದ್ದು ಆಯೋಜಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳುವಂತೆ ಇಂದು ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಕಾರ್ಯಕ್ರಮದ ಆಯೋಜಕರ ವಿರುದ್ಧ ದೂರು ದಾಖಲಿಸಲಾಯಿತು..
