24/02/2026
IMG-20260223-WA0005

ಮೊದಲ ವಿವಾಹ ಮಹೋತ್ಸವ ಮನಸ್ಸಿಗೆ ಅಪಾರ ಸಂತಸ ತಂದಿದೆ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ-23:ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾರ್ವಜನಿಕರ ಹಾಗೂ ರೈತರ ಮಕ್ಕಳ ಕಲ್ಯಾಣ ಹಾಗೂ ಇತರ ಕಾರ್ಯಕ್ರಮಗಳ ಅನುಕೂಲಕ್ಕಾಗಿ ಸುಮಾರು 2 ಕೋಟಿ ರೂ.ಗಳ ವೆಚ್ಚದಲ್ಲಿ ಮಾಸ್ತಮರ್ಡಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಟ್ಟಿಸಿರುವ ಭವ್ಯ ಸಾರ್ವಜನಿಕ ಕಲ್ಯಾಣ ಮಂಟಪದಲ್ಲಿ ಇಂದು ಮೊದಲ ವಿವಾಹ ಮಹೋತ್ಸವ ಜರುಗಿತು.

ಈ ಮದುವೆಯಲ್ಲಿ ಪಾಲ್ಗೊಂಡ ಸಚಿವರು, ಮನಸ್ಸಿಗೆ ಅಪಾರ ಸಂತಸ ಹಾಗೂ ತೃಪ್ತಿ ನೀಡಿದೆ ಎಂದು ಪ್ರತಿಕ್ರಿಯಿಸಿದರು.

ಗ್ರಾಮದ ಹಿರಿಯರಾದ ಚನ್ನಗೌಡ ಪಾಟೀಲ ಅವರ ಸುಪುತ್ರನ ಮದುವೆ ಸಮಾರಂಭವು ಈ ಸುಸಜ್ಜಿತ ಮಂಟಪದಲ್ಲಿ ವೈಭವದಿಂದ ನಡೆಯಿತು. ನಾವು ಮಾಡಿದ ಅಭಿವೃದ್ಧಿ ಕಾರ್ಯ ಸಾರ್ಥಕವಾದ ಕ್ಷಣ ಇದು ಎಂದು ಹೆಬ್ಬಾಳಕರ್ ಹೇಳಿದರು.

ಈ ಶುಭ ಸಂದರ್ಭದಲ್ಲಿ ಪಾಟೀಲ ಕುಟುಂಬದ ನವದಂಪತಿಗಳ ಸುಖಿ ಸಂಸಾರಕ್ಕಾಗಿ ಶುಭ ಹಾರೈಸಿದರು.‌

​ಕ್ಷೇತ್ರದ ಜನರ ಸೇವೆಗೆ ಈ ಕಲ್ಯಾಣ ಮಂಟಪ ಸದಾ ಮುಕ್ತವಾಗಿದ್ದು, ನಿಮ್ಮೆಲ್ಲರ ಹಾರೈಕೆ ಸದಾ ನನ್ನ ಮೇಲಿರಲಿ ಎಂದು ಆಶಿಸುತ್ತೇನೆ. ಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಇಂತಹ ಕಲ್ಯಾಣ ಮಂಟಪಗಳು ನಿರ್ಮಾಣಗೊಳ್ಳಲಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು. ‌

Leave a Reply

Your email address will not be published. Required fields are marked *

error: Content is protected !!