21/02/2026
IMG-20260220-WA0010

ಬೆಳಗಾವಿ-20: ರಾಜ್ಯದ ಎರಡನೇಯ ರಾಜ್ಯಧಾನಿ ಕುಂದಾನಗರಿ ಬೆಳಗಾವಿ ದಿನನಿತ್ಯ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವುದರಿಂದ, ಬೆಳಗಾವಿಯ ಜನತೆಗೆ ಅನಕೂಲ ವಾಗುವ ನಿಟ್ಟಿನಲ್ಲಿ, ಫೆ.22 ರಂದು ಜಂಬಗಿ ಸೂಪರ್ ಸ್ಪೆಷಾಲಿಟಿ ನೇತ್ರ ಸಂಸ್ಥೆ ಹಾಗೂ ಬೆಳಗಾವಿ ಲೇಸರ್ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್ ಆಸ್ಪತ್ರೆಯು ನಗರದ ಕೊಲ್ಹಾಪೂರ್ ವೃತ್ತದಲ್ಲಿ ಲೋಕಾರ್ಪಣೆ ಗೊಳ್ಳಲಿದೆ. ಎಂದು ಜಂಬಗಿ ಸೂಪರ್ ಸ್ಪೆಷಾಲಿಟಿ ನೇತ್ರ ಸಂಸ್ಥೆಯ ಎಂಡಿ ಲಕ್ಷ್ಮಣ ಜಬಂಗಿ ಹೇಳಿದರು.
ಗುರುವಾರ ನಗರದ ಕೊಲ್ಹಾಪೂರ್ ವೃತ್ತದಲ್ಲಿರುವ ಜಂಬಗಿ ಕಣ್ಣಿನ ಸಂಸ್ಥೆಯ ಆಸ್ಪತ್ರೆಯಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಂಬಗಿ ಸೂಪರ್ ಸ್ಪೆಷಾಲಿಟಿ ನೇತ್ರ ಸಂಸ್ಥೆಯು ನೂತನವಾಗಿ ಪ್ರಾರಂಭಕೊಳ್ಳುವುದಕ್ಕೆ ಸಜ್ಜಾಗಿದ್ದು, ಬೆಳಗಾವಿಯಲ್ಲಿಯೇ ಜಾಗತಿಕ ಮಟ್ಟದಲ್ಲಿ ಜನತೆಗೆ ಅನಕೂಲವಾಗುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಪ್ರಾರಂಭ ಮಾಡಲಾಗುತ್ತಿದೆ, ಫೆ.22 ರಂದು ನೂತನ ಕಣ್ಣಿನ ಆಸ್ಪತ್ರೆಯನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಡಾ. ಪ್ರಭಾಕರ್ ಕೋರೆ ಅವರ ನೇತ್ರತ್ವದಲ್ಲಿ ಲೋಕಾರ್ಪಣೆ ಗೊಳಿಸಲಿದ್ದಾರೆ ಎಂದು ಹೇಳಿದರು.
ದೂರದ ನಗರಗಳಿಗೆ ಪ್ರಯಾಣಿಸದೇ, ಬೆಳಗಾವಿಯಲ್ಲೇ ಜಾಗತಿಕ ಮಟ್ಟದ ಕಣ್ಣು ಚಿಕಿತ್ಸೆಯನ್ನು ಪಡೆಯುವ ಒಂದು ಅವಕಾಶ ಇದ್ದಾಗಿದೆ ಎಂದು ತಿಳಿಸಿದರು. ಡಾ. ಲಕ್ಷಣ ಜಂಬಗಿ ಮತ್ತು ಡಾ. ವರ್ಷಾ ಜಂಬಗಿ ಅವರು ಕಳೆದ 30 ವರ್ಷಗಳ ಸೇವಾ ಪರಂಪರೆಯ ಮೇಲೆ ನಿರ್ಮಿತವಾಗಿರುವ ಈ ಸಂಸ್ಥೆಯಾಗಿದೆ. ಮಾನವೀಯ ಸೇವೆಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಿ, ರೋಗಿಗಳಿಗೆ ಅತಿ ಶೀಘ್ರ ಹಾಗೂ ಉತ್ತಮ ದೃಷ್ಟಿ ಫಲಿತಾಂಶವನ್ನು ಒದಗಿಸುವ ನಿರೀಕ್ಷೆಯಲ್ಲಿದ್ದೇವೆ ಎಂದರು.
ಈ ಕಣ್ಣಿನ ಸಂಸ್ಥೆಯು ಡಾ. ಅಮೋಘ ಲಕ್ಷಣ ಜಂಬಗಿ ಅವರ ನೇತೃತ್ವದಲ್ಲಿ ಜಂಬಗಿ ಸೂಪರ್ ಸ್ಪೆಷಾಲಿಟಿ ನೇತ್ರ ಸಂಸ್ಥೆ ಪ್ರಾರಂಭಗೊಳ್ಳಲಿದ್ದು, ಇದು ಸುಮಾರು 35,000 ಚದರ ಅಡಿಗಳ ವಿಶಾಲ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.
ಈ ಸಂಸ್ಥೆ, ಒಂದೇ ಸೂರಿನಡಿ ಸಂಪೂರ್ಣ ಕಣ್ಣಿನ ಚಿಕಿತ್ಸೆಯನ್ನು ಒದಗಿಸುತ್ತದೆ. ಇದರಲ್ಲಿ ಕಣ್ಣಿನ ಮೋತಿ ಬಿಂದು, ಕ್ಯಾಟರಾಕ್ಟ್, ಕಾರ್ನಿಯಾ, ರೆಟಿನಾ, ಗ್ಲಕೋಮಾ, ಮಕ್ಕಳ ನೇತ್ರಚಿಕಿತ್ಸೆ, ಒಕ್ಕುಲೋಪ್ಲಾಸ್ಟಿ, ನ್ಯೂರೋ-ಆಫ್ತಾಲ್ಮಾಲಜಿ, ರಿಫ್ರಾಕ್ಟಿವ್ ಶಸ್ತ್ರಚಿಕಿತ್ಸೆ ಸೇರಿದಂತೆ ವಿಶೇಷ ಡ್ರೈ ಐ ಹಾಗೂ ಕಾಂಟ್ಯಾಕ್ಸ್ ಲೆನ್ಸ್ ಕ್ಲಿನಿಕ್ ಕೂಡ ಸೇರಿದೆ ಎಂದು ಹೇಳಿದರು.
ಇನ್ನು ಈ ಸಂಸ್ಥೆಯಲ್ಲಿ ಮೊದಲ ಬಾರಿಗೆ ರೋಬೋಟಿಕ್ 4) ಫ್ಯಾಕೋ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ಮುಕ್ತಿಗಾಗಿ ಜೈಸ್ಟ್ MEL 90 ಎಕ್ಸೆಮರ್ ಲೇಸರ್ ತಂತ್ರಜ್ಞಾನವನ್ನು ಹೆಚ್ಚಿನ ನಿಖರತೆ, ಸುರಕ್ಷತೆ ಮತ್ತು ವೇಗವಾದ ಗುಣಮುಖತೆಯನ್ನುಪಡೆದುಕೊಳ್ಳಲಿದೆ ಎಂದು ತಿಳಿಸಿದರು.
ಈ ಸಂಸ್ಥೆಯಲ್ಲಿ ಡಾ. ಅಮೋಘ ಜಂಬಗಿ ಅವರ ತಂಡವು ವಿವಿಧ ಉಪವಿಭಾಗಗಳಲ್ಲಿ ಫೆಲೋಶಿಪ್ ಪಡೆದು ನುರಿತ ವೈಧ್ಯರ ತಂಡವು ಕಾರ್ಯನಿರ್ವಹಿಸಲಿದೆ. ದಿನದ 24 ಗಂಟೆಯೂ ಜನತೆಯ ಸೇವೆ ಮಾಡಲಿದೆ ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ವೇಳೆ ಡಾ. ಜಗದೀಶ ಪಾಟೀಲ, ಡಾ. ಹೇಮಂತ್, ಡಾ. ಸ್ನೇಹಾ ಬಂಡಗೆ, ಡಾ. ಮಿತಾಲಿಶಾ , ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!