13/02/2026
IMG-20260212-WA0005

ಬೆಳಗಾವಿ-12 : ರಾಜ್ಯದ ಪರವಾಗಿ ನಿಜವಾಗಿ ಕೆಲಸ ಮಾಡಿದ್ದರೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ಐದು ಗ್ಯಾರಂಟಿ ಯೋಜನೆಗಳನ್ನು ಏಕೆ ಜಾರಿಗೆ ತರಲಾಯಿತು ಎನ್ನುವುದನ್ನು ಕಾಂಗ್ರೆಸ್‌ ಉತ್ತರಸಬೇಕೆಂದು ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ಬುಧವಾರ ನಡೆದ ದಕ್ಷಿಣ ಘಟಕದ ವತಿಯಿಂದ ಆಯೋಜಿಸಲಾಗಿರುವ ಕೇಂದ್ರ ಬಜೆಟ್‌ ಕುರಿತು ಮಹಿಳೆಯರೊಂದಿಗೆ ಸಂವಾದ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರಭಾಕರ ಕೋರೆ ಅವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ನಂತರ ದೇಶದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರದ ಚುಕ್ಕಾನೆಯಲ್ಲಿ ಇತ್ತು. ಹಲವು ದಶಕಗಳ ವರೆಗೆ ದೇಶ ಹಾಗೂ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಒಂದುವೇಳೆ ಉತ್ತಮ ಕೆಲಸ ಮಾಡಿದ್ದರೆ ರಾಜ್ಯದಲ್ಲಿ ಚುನಾವಣೆಯ ಪೂರ್ವದಲ್ಲಿ ಜನತಡಗೆ ಸುಳ್ಳು ಭರವಸೆಗಳ ಗ್ಯಾರಂಟಿ ಯೋಜನೆ ಜಾರಿಗೆ ತರುವ ಅವಶ್ಯಕತೆ ಏನಿತ್ತು ಎಂದರು.

ರಾಜ್ಯದಕ್ಕೆ‌ ಕೇಂದ್ರ‌ ಸರಕಾರವು ಅನ್ಯಾಯ ಮಾಡುತ್ತಿದೆ ಎಂದು ಕೇಂದ್ರದ ವಿರುದ್ದ ನೂರಾರು ಸುಳ್ಳುಗಳನ್ನು ಹೇಳಿಕೊಂಡು ತಿರುಗಾಡುವುದೆ ಕಾಂಗ್ರೆಸ್ ನ ಕೆಲಸವಾಗಿದೆ ಇವರ ಸಾಧನೆಗಳ ಬಗ್ಗೆ ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ತಿಳಸಬೇಕೆಂದು‌ ಒತ್ತಾಯಿಸಿದರು.

ಕಳೆದ 12 ವರ್ಷಗಳಿಂದ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಸುಳ್ಳು ಹೇಳುವುದೇ ಕಾಂಗ್ರೆಸ್‌ನ ಸಾಧನೆ. ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ನಾನಾ ಹಗರಣ ನಡೆಯುತ್ತಿದ್ದವು. ದೇಶದ ಆರ್ಥಿಕತೆ ಸಂಪೂರ್ಣವಾಗಿ ನಾಶ ಮಾಡಿದರು.ಆದರೆ, ಮೋದಿ ನೇತೃತ್ವದ ಸರಕಾರ ದೇಶದಲ್ಲಿ ಆರ್ಥಿಕತೆ ಸುಧಾರಣೆ ಮಾಡಿದ್ದಾರೆ ಎಂದು‌ ಹೇಳಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸತತ 9ನೇ ಬಾರಿ ಮಂಡಿಸಿದ ಬಜೆಟ್‌ ರಾಷ್ಟ್ರದ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ, ದೇಶದ ಪರಿಸ್ಥಿತಿ ಹೇಗಿತ್ತು ಇದೀಗ ದೇಶದ ಎಷ್ಟು ಅಭಿವೃದ್ಧಿ ಯಾಗಿದೆ ಇನ್ನು ಎಷ್ಟರಮಟ್ಟಿಗೆ ಅಭಿವೃದ್ಧಿಯ ಕಡೆಗೆ ಸಾಗುತ್ತದೆ ಎಂದು‌ ದೇಶದ ಪ್ರತಿ ಗ್ರಾಮಗಳಿಗೂ ಗೊತ್ತಿದೆ. ಮೋದಿ ಸರಕಾರದ ನೀತಿಗಳು ರೈತರು, ಬಡವರು, ಯುವಕರು ಮತ್ತು ಮಹಿಳೆಯರ ಸುತ್ತ ಕೇಂದ್ರಿಕೃತವಾಗಿವೆ ಎಂದು‌ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!