23/12/2024
IMG-20240207-WA0084

ಬೆಳಗಾವಿ-07 : ದ್ವೀತಿಯ ಪಿಯುಸಿ ವಿದ್ಯಾರ್ಥಿಗಳು ಹೊಳೆಯುವ ನಕ್ಷತ್ರಗಳು ಅವರ ಬಾಳಿಗೆ ಪ್ರೇರಣೆ ನೀಡುವ ನಿಟ್ಟಿನಿಂದ ಬಡತನದಲ್ಲಿಯೇ ಬದುಕನ್ನು ರೂಪಿಸಿಕೊಂಡ ಗೂಗಲ್ ಸಿಇಓ ಸುಂದರ್ ಪಿಚೈ ಹಾಗೂ ಎಲ್ಲರರಿಗೂ ಸ್ಪೂರ್ತಿಯಾದ ಸುಧಾಮೂರ್ತಿಯ ಜೀವನ ಗಾಥೆಯನ್ನು ಹೇಳಿ ಬದುಕನ್ನು ರೂಪಿಸಿಕೊಳ್ಳು ಪ್ರಯತ್ನಿಸಿ ಎಂದು ದೇವೆಂದ್ರ ಜಿನಗೌಡ ಸಂಸ್ಥೆಯ ಚೇರಮನ್ ಗೋಪಾಲ ಜಿನಗೌಡ ರವರು ಹೇಳಿದರು.
ಇತ್ತಿಚಿಗೆ ಶಿಂದೊಳ್ಳಿ ಗ್ರಾಮದ ಗೋಪಾಲಜಿ ಇಂಟಿಗ್ರೇಟೆಡ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಠ್ಯಗಳು ವಿದ್ಯಾರ್ಥಿಗಳ ಅವಿಭಾಜ್ಯ ಅಂಗಗಳು ಇದರ ಜೊತೆಗೆ ಅವರಲ್ಲಿರುವ ವಿವಿಧ ಪ್ರತಿಭೆಯನ್ನು ಹೊರತರಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯಗಳನ್ನು ಅನಾವರಣ ಮಾಡಬೇಕೆಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಇದೇ ಸಂದರ್ಭದಲ್ಲಿ ಕ್ರೀಡಾ ಸ್ಪರ್ದೇಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರಾಚಾರ್ಯ ಪ್ರೀಯಾ ಮೂಡಲಗಿ ಅತಿಥಿಗಳನ್ನು ಸ್ವಾಗತಿಸಿ ಪ್ರಮುಖ ಕ್ಷಣಗಳನ್ನು ಮೆಲುಕು ಹಾಕಿದರು. 2023-2024 ನೇ ಸಾಲಿನ ಅತ್ಯತ್ತಮ್ಮ ವಿದ್ಯಾಥಿಗಳೆಂದು ಆಯ್ಕೆಯಾದ ಶಾಂಭವಿ ಯರಜನ್ವಿ ಮತ್ತು ಪ್ರಜ್ಚಲ ಕೆ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ದೇವೆಂದ್ರ ಜಿನಗೌಡ ಶಾಲೆಯ ಸೆಕ್ರೇಟರಿ ಕುಂತುಸಾಗರ ಹರದಿ ಮ್ಯಾನೇಜಮೆಂಟ್ ಟ್ರಸ್ಟಿ ಅಭಿನಂದನ್ ಅವಲಕ್ಕಿ ಶಾಲೆಯ ಮುಖ್ಯೋಪಾಧ್ಯಾಯರಾದ ವಿಜಯಲಕ್ಷಿö್ಮÃ ಪಾಟೀಲ ಮತ್ತು ಉಪ ಮುಖ್ಯೋಪಾಧ್ಯಯರಾದ ರೋಷಣಿ ರೋಡ್ರಿಕ್ಸ್ ಉಪಸ್ಥಿತರಿದ್ದರು. ಜ್ಯೋತಿ ಬಡಿಗೇರ್, ಶ್ರೀದೇವಿ ಖಾನಾಪುರ,ಭಾರತಿ ರಾಂಗನೇಕರ ಸೇರಿದಂತೆ ಮೊದಲಾವರು ಉಪಸ್ಥಿತರಿದ್ದರು. ಸವಿತಾ ಮೇತ್ರಿ ವಾರ್ಷಿಕ ವರದಿ ವಾನ ಮಾಡಿ ಕೊನೆಯಲ್ಲಿ ವಂದಿಸಿದರು. ಅಶ್ವೀನಿ ಕಲಮನಿ ಕಾರ್ಯಕ್ರಮವನ್ನು ನಿರೂಪಿಸಿದರು..

error: Content is protected !!