ಬೆಳಗಾವಿ -04:ಶನಿವಾರ ಬೆಳಗಾವಿ ನಗರದಲ್ಲಿ ಸಂಭ್ರಮ ದ ಬನದ ಹುಣ್ಣಿಮೆ ಅಥವಾ ಬನಶಂಕರಿ ಉತ್ಸವ ಆಚರಿಸಲಾಗುತ್ತದೆ.
ಈ ದಿನ ಕೆಲವು ಆಚರಣೆಗಳನ್ನು ಪಾಲಿಸಿದರೆ ಪತಿಯ ಆಯಸ್ಸು ಗಟ್ಟಿಯಾಗುತ್ತದೆ. ಅಲ್ಲದೇ ಲಕ್ಷ್ಮೀಯ ಅನುಗ್ರಹವೂ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿಯೇ ಬನಹುಣ್ಣಿಮೆ ಹಿಂದೂ ಸಂಪ್ರದಾಯದಲ್ಲಿ ಅತೀ ವಿಜ್ರಂಭಣೆಯಿಂದ ಬೆಳಗಾವಿ ನಗರದ ಹಟ್ಟಿ ಹೋಳಿ ಗಲ್ಲಿ ಶಹಾಪೂರದಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಬಣದ ಹುಣ್ಣಿಮೆ ಆಚರಿಸಿದರು.
