ಬೆಳಗಾವಿ-28: ನಗರದ ಹಿಂಡಲಗಾ ಸಮೀಪದ ಪ್ರದೇಶದಲ್ಲಿರುವ ಮಹಾತ್ಮಗಾಂಧಿ ಅವರ ಪ್ರತಿಮೆಗೆ ಸಾಂತಾ ಕ್ಲಾಸ್ ಟೋಫಿ ಹಾಕಿ ಅವಮಾನ ಮಾಡಿರುವ ಘಟನೆಯೊಂದು ನಡೆದಿದೆ ಎನ್ನಲಾಗುತ್ತಿದೆ.
ಹಿಂಡಲಗಾ ರಸ್ತೆಯಲ್ಲಿರುವ ಗಾಂಧಿ ಚೌಕ್ ನಲ್ಲಿರುವ ಗಾಂಧಿ ಪ್ರತಿಮೆಗೆ ರಾತ್ರಿವೇಳೆ ಕಿಡಗೇಡಿಗಳು ಸಾಂತಾ ಕ್ಲಾಸ್ ಕೆಂಪು ಟೋಪಿ ಹಾಕಿ ಅವಮಾನಿಸಲಾಗಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಗಾಂಧಿ ಪ್ರತಿಮೆಯ ಮೇಲೆ ಇದ್ದ ಟೋಪಿ ತೆರವು ಗೊಳಿಸಿದ್ದಾರೆ.
ಈ ಕೃತ್ಯವನ್ನು ಎಸಗಿರುವ ಆರೋಪಿಗಳ ಬಗ್ಗೆ ಪತ್ಯೆ ಹಚ್ಚಿ ಕಾನೂನಿನ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪೊಲೀಸರಿಗೆ ಒತ್ತಾಯಿಸಿದರು.
