ಬೆಳಗಾವಿ-06 : ಇಲ್ಲಿಯ ಭರತೇಶ ಶಿಕ್ಷಣ ಸಂಸ್ಥೆಯ ಗ್ಲೋಬಲ್ ಬಿಜಿನೆಸ್ ಸ್ಕೂಲ ಎಂ.ಬಿ.ಎ ಮಹಾವಿದ್ಯಾಲಯದಲ್ಲಿ ಇತ್ತಿಚಿಗೆ ಹಣಕಾಸು ನಿರ್ವಹಣೆ ಕುರಿತು ಎರಡು ದಿನಗಳ ಕಾರ್ಯಾಗಾರ ನಡೆಯಿತು.
ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಸೆಕ್ಯೂರಿಟಿಸ್ ಮಾರ್ಕೆಟ ಮತ್ತು ಇನ್ಸಿಟ್ಯೂಟ್ ಆಫ್ ಸೆಕ್ಯೂರಿಟಿ ಎಕ್ಸೆಂಜ ಬೋರ್ಡ ಇವರ ಸಹಯೋಗದಲ್ಲಿ ಹಾಗೂ ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ ವತಿಯಿಂದ ಕಾರ್ಪೋರೇಟ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಮಹಾಂತೇಶ ಕುರಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತ , ಸೆಬಿ ಸಂಸ್ಥೆಯು ಇತ್ತಿಚಿಗೆ ಜಾರಿಗೆ ತಂದ ಹೊಸ ನಿಯಮಗಳು, ಮಾರುಕಟ್ಟೆಯಲ್ಲಿ ಹೂಡಿಕೆಗಳ ಪ್ರಾಮುಖ್ಯತೆ, ಸೆಕ್ಯೂರಿಟೆ ಮಾರುಕಟ್ಟೆಗಳ ಪರಿಚಯ, ಹಣ ಹೂಡಿಕೆಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಥಮ ಹಂತ ಮತ್ತು ದ್ವೀತಿಯ ಹಂತದ ಮುನ್ನಚ್ಚರಿಕೆಗಳು, ಮ್ಯೂಚಯಲ್ ಫಂಡಗಳ ಕಾರ್ಯನಿರ್ವಹಣೆ, ಹಣ ಹೂಡಿಕೆದಾರ ರಕ್ಷಣೆ, ಮತ್ತು ಕುಂದುಕೊರತೆಗಳ ಪರಿಹಾರವನ್ನು ಯಾವ ರೀತಿ ಪರಿಹರಿಸಬೇಕೆಂಬುದರ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಯಿತು.
ಎಂ.ಬಿ.ಎ . ವಿದ್ಯಾರ್ಥಿ ನಿಖಿಲ ರಾಘಶೆಟ್ಟಿ, ಪ್ರೋಫೆಸರ್ ರಂಜನಾ ಉಪಾಸಿ ಹಾಗೂ ನಿರ್ದೇಶಕ ಡಾ.ಪ್ರಸಾದ ದಡ್ಡಿಕರ ಅವರು ಕಾರ್ಯಾಗಾರ ಯಶಸ್ವಿಯಾಗಿ ಆಯೋಜಿಸಿದ್ದರು. ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿದ್ದರು.