ಬೆಳಗಾವಿ-19: ಭಾರತದ ಪ್ರಮುಖ ಮತ್ತು ಅಫೋರ್ಡಬಲ್ ಎಡ್ಟೆಕ್ ಸಂಸ್ಥೆಯಾದ ಫಿಸಿಕ್ಸ್ ವಾಲ್ಲಾ ಸಂಸ್ಥೆಯು ಬೆಳಗಾವಿಯಲ್ಲಿ ತನ್ನ ಹೊಸ ವಿದ್ಯಾಪೀಠ ಪಾಠಶಾಲೆ ಕೇಂದ್ರವನ್ನು ಇದೇ ಡಿಸೆಂಬರ್ 21 ರಂದು ಬೆಳಿಗ್ಗೆ10.30 ಕ್ಕೆ ನಗರದ ಗಾಂಧಿ ಭವನದಲ್ಲಿ ಉದ್ಘಾಟಿಸಲಿದೆ.
ಶುಕ್ರವಾರ ನಗರದಲ್ಲಿ ಮಂಜುನಾಥ್ ಅಂಗಡಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆಯು ಹುಬ್ಬಳ್ಳಿ, ಧಾರವಾಡ, ಬೀದರ್, ಕಲಬುರಗಿ ಹಾಗೂ ಮೈಸೂರು ಕೇಂದ್ರಗಳ ಯಶಸ್ಸಿಯಾದ ಬಳಿಕ ಬೆಳಗಾವಿಯಲ್ಲಿಯೂ ಪ್ರಾರಂಭ ಮಾಡುತ್ತಿದ್ದೇವೆ. ಈ ಸಂಸ್ಥೆಯು ಕೇಂದ್ರವು ಫೌಂಡೇಶನ್, ಬೋರ್ಡ್ಸ್ ಹಾಗೂ (ಜೆಇಇ, ಕೆಸಿಇಟಿ) ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಅಲ್ಪ ವೆಚ್ಚದ ಶಿಕ್ಷಣ ಒದಗಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.
ಡಿಸೆಂಬರ್ 21 ರಂದು ಉದ್ಘಾಟನೆ ಕಾರ್ಯಕ್ರವನ್ನು ಕಾಲೇಜ್ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಫಿಸಿಕ್ಸ್ ವಾಲ್ಲಾ ಸಂಸ್ಥೆಯ ಖ್ಯಾತ ಸ್ಟಾರ್ ಫ್ಯಾಕಲ್ಟಿ ರಿತಿಕ್ ಮತ್ತು ಸಿಂಧೂ ಅವರ ನೇತ್ರದಲ್ಲಿ ಕಾರ್ಯಕ್ರಮ ಉದ್ಘಾಟನೆ ಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ವಿಧ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಕರಿಯರ್ ಕೌನ್ಸೆಲಿಂಗ್ ಹಾಗೂ ಬೋರ್ಡ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಾವ ರೀತಿ ತರಾರು ಮಾಡಿಕೊಳ್ಳವಬೇಕೆಂದು ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಫಿಸಿಕ್ಸ್ ವಾಲ್ಲಾ ಸಂಸ್ಥೆ 2024ರಲ್ಲಿ ಪ್ರಾರಂಭವಾಗಿದ್ದು, ಇಲ್ಲಿಯ ವರೆಗೆ 22 ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ವೈಧ್ಯರಾಗಿದ್ದಾರೆ. 3,600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಐಐಟಿಗಳಲ್ಲಿ ಪ್ರವೇಶ ಪಡೆದಿದ್ದಾರೆ. ಒಟ್ಟು 41,500 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಈ ಉದ್ಘಾಟನೆಯ ಆರಂಭ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜುಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳೀಗೆ ಗೌರವಿಸಲಾಗುವುದು ಎಂದು ಫಿಸಿಕ್ಸ ವಾಲ್ಲಾ ಸಂಸ್ಥೆಯ ಕಾರ್ಯಕ್ರಮದ ಆಯೋಜಕರು ತಿಳಿಸಿದರು.
