ಬೆಳಗಾವಿ-18:ಮಹಾರಾಷ್ಟ್ರ ಸರಕಾರದ ಮಾದರಿಯಲ್ಲಿ ಕರ್ನಾಟಕ ಗೋಶಾಲೆಗಳಿಗೆ ಅನುದಾನ ನೀಡುವಂತೆ ಒತ್ತಾಯಿಸಿ ಶ್ರೀ.1008 ಮಹಾಮಂಡಲೇಶ್ವರ ಸ್ವಾಮಿಜಿ ಮೌನ ಕಾಡಸಿದ್ದೇಶ್ವರ ಮಹಾರಾಜರು ಪ್ರತಿಭಟಿಸಿದರು.
,ಮಹಾರಾಷ್ಟ್ರ ಸರಕಾರ ಗೋಶಾಲೆಗಳಿಗೆ ಮಹಾರಾಷ್ಟ್ರದಲ್ಲಿ ಪ್ರತಿ ಹಸುವಿಗೆ 50 ರೂಗಳ ನೀಡುತ್ತಿದ್ದಾರೆ.ಅದರಂತೆ ನಮ್ಮ ರಾಜ್ಯದಲ್ಲಿ ಹಣ ನೀಡಬೇಕು ಎಂದು ಒತ್ತಾಯಿಸಿದರು.ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ದನಕರುಗಳಿಗೆ ಇಂತಹ ಸಂದರ್ಭದಲ್ಲಿ ಮೇವು ಸಿಗುವದಿಲ್ಲ.ಇದರಿಂದಾಗಿ ರಾಜ್ಯದಲ್ಲಿ ಜಾನುವಾರುಗಳಿಗೆ ನಿರ್ವಹಣೆ ಮಾಡಲು ಸಂಕಷ್ಟವಾಗುತ್ತಿದೆ ಅದಕ್ಕಾಗಿ ಸರಕಾರ ಪ್ರತಿ ದಿನ ಹಸುವಿಗೆ ಮೇವು ನೀಡಲು ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
