ಬೆಳಗಾವಿ-18: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಮಂಜುರಿ ಮಾಡುವಂತೆ ಆಗ್ರಹಿಸಿ ಮಲ್ಪಿ ಸ್ಪೇಷಾಲಿಟಿ ಆಸ್ಪತ್ರೆ ಹೋರಾಟ ಸಮಿತಿ ಆಗ್ರಹಿಸಿ ಸುವರ್ಣಸೌಧದ ಪಕ್ಕದಲ್ಲಿರುವ ಪ್ರತಿಭಟನಾ ಸ್ಥಳದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಕಳೆದ ಹಲವು ದಶಕಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಪಿ ಸ್ಪೇಷಾಲಿಟಿ ಆಸ್ಪತ್ರೆ ಮಂಜುರು ಮಾಡಬೇಕೆಂದು ಎಲ್ಲ ಸರಕಾರಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿನ ಅತ್ತಿಕಿರು ರಸ್ತೆಗಳು ಇದ್ದು ಮಳೆಗಾಲದಲ್ಲಿ ಭೂಕುಸಿತ ಮತ್ತು ದಟ್ಟ ಕಾಡು ಎಲ್ಲವು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ತೆರಳುವುದಕ್ಕೆ ಕಷ್ಟಕರವಾಗುತ್ತಿದೆ. ಸಣ್ಣ ಪುಟ್ಟ ಹಳ್ಳಿಗಳಿಂದ 170. ಕಿಮೀ ದೂರದ ಆಸ್ಪತ್ರೆಗಳಿಗೆ ತೆರಳಬೇಕಾಗುತ್ತಿದೆ. ಆಸ್ಪತ್ರೆಗಳಿಗೆ ತೆರಳಬೇಕಾದರೆ ಅಂಬುಲೆನ್ಸ್ ಗಳಿಗೆ ಹಣ ನೀಡಬೇಕಾಗುತ್ತಿದೆ,
ಪಶ್ವಿಮಘಟ್ಟದ ದೂರದ ಪ್ರದೇಶಗಳಲ್ಲಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪಿಸಿದರೇ ಮಾತ್ರವೇ ಈ ಭಾಗದಲ್ಲಿ ಅಭಿವೃದ್ಧಿ ಯಾಗುವುದಕ್ಕೆ ಸಾಧ್ಯವೆಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ಪಶ್ಚಿಮ ಘಟಗಳಲ್ಲಿ ವಿದ್ಯುತ್, ಉತ್ಪತ್ತಿ ದೊಡ್ಡ ಯೋಜನೆಗಳು ಸುರಂಗ ತೋಡುವುದು ಇನಿತರ ಪರಿಸರ ಹಾನಿ ಮಾಡದೆ ನಮ್ಮಬೇಡಿಕೆಗಳನ್ನು ಇಡೇರಿಸಬೇಕು, 2018 ರಿಂದ 2025 ರ ವರೆಗೆ ಸುಮಾರು 95 ಕ್ಕೂ ಹೆಚ್ಚು ಜನತೆಯು ನಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಹೃದಯ ಮೆದುಳು ಹಾಗೂ ಇನ್ನಿತರ ಕಾಯಿಲೆಗಳಿಂದ ಜನತೆಯು ಜೀವ ಕಳೆದುಕೊಳ್ಳುತ್ತಿದ್ದಾರೆ. ಕೂಡಲೇ ಸರಕಾರ ಸ್ಪಂದಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಪಿ ಸ್ಪೇಷಾಲಿಟಿ ಆಸ್ಪತ್ರೆ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾಸ್ಪಪ್ಪ ಮಂಜಪ್ಪ ನಾಯ್ಕ, ಪ್ರಶಾಂತ, ಆನಂದ ಗುರವ, ಸಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
