14/12/2025
IMG-20251213-WA0000
  1. ಬೆಳಗಾವಿ-13: ಉತ್ತರ ಕರ್ನಾಟಕ ಅಭಿವೃಧಿಗಾಗಿ, ಸುಮಾರು 15 – 20 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಎಲ್ಲ ಸರಕಾರಗಳಿಗೆ ಹಲವು ಬಾರಿ ಮನವಿಯನ್ನು ಮಡಿಕೊಂಡಿದ್ದೇವೆ ಆದರೆ ಇಲ್ಲಿಯ ವರೆಗೆ ಯಾವುದೇ ಪ್ರಯೋಜನೆ ಯಾಗಿಲ್ಲವೆಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ಸದಸ್ಯರು ಅಸಮಾಧಾನವನ್ನು ಹೊರ ಹಾಕಿದರು.

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸರಕಾರಕ್ಕೆ ವಿವಿಧ ಬೇಡಕೆಗಳನ್ನು ಇಟ್ಟುಕೊಂಡು, ಉತ್ತರ ಕರ್ನಾಟಕl ಹೋರಾಟ ಸಮಿತಿಯು ಕಳೆದ 10 ವರ್ಷಗಳಿಂದ. ಅನೇಕ ಬೇಡಿಕೆಗಳ ಬಗ್ಗೆ ಮನವಿ ಮಾಡುತ್ತಾ ಬಂದಿದೆ ಎಂದು ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಾಗೇಶ ಗೋಲಶೆಟ್ಟಿ. ಅಂದಿನಿಂದ ಇಲ್ಲಿಯ ವರೆಗೆ ಯಾವೊಂದು ಬೇಡಿಕೆಗಳನ್ನು ಪೂರ್ಣಗೊಳಿಸಿಲ್ಲ. ಇತ್ತೀಚಿಗೆ ಉತ್ತರ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಉತ್ತರ ಕರ್ನಾಟಕ ವಿಕಾಸ ವೇದಿಕೆ, ಉತ್ತರ ಕರ್ನಾಟಕ ರೈತ ಸಂಘ ಹಾಗೂ ಅನೇಕ ಸಂಘಟನೆಗಳ ಸಹಕಾರದ ವಿರುದ್ದ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ ಎಂದು ಮಾಧ್ಯಮಗಳ ಮೂಲಕ ರಾಜ್ಯ ಸರಕಾರದ ವಿರುದ್ದ ಆಕ್ರೋಶ್ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕದ ಬೇಡಿಕೆಗಳು;
ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕು. ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಬೇಕು. ಕಿತ್ತೂರು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ಅವತ್ತಿನಿಂದ ಇಲ್ಲಿಯ ವರೆಗೆ ಮೂರು ಮುಖ್ಯ ಬೇಡಿಕೆಗಳಿಗಾಗಿ ಎಷ್ಟೇ ಹೋರಾಟ ಮಾಡಿದರು ಸರಕಾರಗಳು ತೀರ್ಮಾನ ಕೈಗೊಳ್ಳುತ್ತಿಲ್ಲ. ಪ್ರಸ್ತುತ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಈ ಮೂರು ಬೇಡಿಕೆಗಳ ಕುರಿತು ತೀರ್ಮಾನ ತೆಗೆದುಕೊಳ್ಳದೆ ಹೋದರೆ ಜನವರಿ 1, ರಿಂದ ಉತ್ತರ ಕರ್ನಾಟಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಮತ್ತು ಉತ್ತರ ಕರ್ನಾಟಕ ವಿಕಾಸ ವೇದಿಕೆಯ ಸಹಕಾರದೊಂದಿಗೆ ಎಲ್ಲ ಸಂಘಟನೆಗಳ ನೇತ್ರತ್ವದಲ್ಲಿ, ಆಮರಣ ಉಪವಾಸ ಕೈಗೊಳ್ಳಲಿದ್ದೇವೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಡಿ.೧೯ ರ ಚಳಿಗಾಲ ಅಧಿವೇಶನ ಮುಗಿಯುವುದ ಒಳಗಾಗಿಯೇ, ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಯ ಕುರಿತು ಎಲ್ಲ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ ಎಂದರು.
ಕಾಗವಾಡ ಶಾಸಕ ರಾಜು ಕಾಗೆ ಅವರು ಪ್ರತ್ಯೇಕ ರಾಜ್ಯದ ಪರವಾಗಿ ಧ್ವನಿ ಎತ್ತಿದ್ದಾರೆ. ಡಿ.16 ರಂದು ಐದು ಸಾವಿರ ಜನರನ್ನು ಸೇರಿಸಿ, ಯಡಿಯೂರಪ್ಪ ಮಾರ್ಗದಲ್ಲಿರುವ ಪ್ರತಿಭಟನಾ ಸ್ಥಳದಲ್ಲಿ, ಉ.ಕ ಹೋರಾಟ ಸಮಿತಿ ನೇತ್ರತ್ವದಲ್ಲಿ ಸರಕಾರದ ವಿರುದ್ದ ಆಮರಣ ಧರಣಿ ಉಪವಾಸ ಸತ್ಯಾಗ್ರಹ ಹೋರಾಟ ಮಾಡಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ಈ ವೇಳೆ ನಾಗೇಶ ಗೋಲಶೆಟ್ಟಿ, ಸಂಸ್ಥಾಪಕ ರಾಜ್ಯ ಪ್ರದಾನ ಕಾರ್ಯದರ್ಶಿ ಉತ್ತರ ಕರ್ನಾಟಕ ಹೋರಾಟ ಸಮಿತಿ, ವಿಲಿನಕುಮಾರ ತಾರಿಹಾಳ ರಾಜ್ಯ ಸಂಘಟನಾ ಕಾರ್ಯದರ್ಶಿ, ಅಶೋಕ ದೇಶಪಾಂಡೆ. ಬೆಳಗಾವಿ ಜಿಲ್ಲಾ ಕಾರ್ಯದರ್ಶಿ, ಮಹಾಂತೇಶ ಶೆಲ್ಲಿಕೆರಿ. ಅಧ್ಯಕ್ಷರು, ಬೆಳಗಾವಿ ನಗರ ಘಟಕ, ರಾಜು ಕಳಸಣ್ಣವರ . ವಿದ್ಯಾರ್ಥಿ ಘಟಕದ ಸಂಚಾಲಕ, ನಾಗರಾಜ ಕಲಕಟಕರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!