12/12/2025
IMG-20251212-WA0004

 

*ಇದೆ ಅಧಿವೇಶನದಲ್ಲಿ ಒಳಮೀಸಲಾತಿಯ ವಿದೇಯಕ ಮಂಡನೆಯಾಗಲಿದೆ ಆಹಾರ ಸಚಿವ:- ಕೆಹೆಚ್. ಮುನಿಯಪ್ಪ*

*ಪ್ರತಿಯೊಂದು ಕುಟಂಬದಲ್ಲಿಯು ಒಬ್ಬರು ಮಾದರ ಮಹಾಸಭಾ ಸದಸ್ಯರಾಗಿ ತಪ್ಪದೆ ನೊಂದಣಿ ಮಾಡಿಸಬೇಕು*

*ಪಕ್ಷವನ್ನು ಹೊರತು ಪಡಿಸಿ ಸಮುದಾಯದ ಸಂಘಟನೆಯಲ್ಲಿ ಭಾಗ ವಹಿಸಬೇಕು ಸಮುದಾಯ ಮೊದಲು ನಂತರ ಪಕ್ಷಗಳು ನಾವೆಲ್ಲಾ ಒಂದಾಗಿ ಹೋಗಬೇಕಿದೆ*

*ಮಾದರ ಮಹಾಸಭಾ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿ.*

ಬೆಳಗಾವಿ.12:ಮಾದರ ಮಹಾಸಭಾದ ವತಿಯಿಂದ ಇಂದು ರಾಜ್ಯ ಕಾರ್ಯಕಾರಣಿ ಸಮಿತಿಯ ಸಭೆಯನ್ನು ಬೆಳಗಾವಿಯ ಮಯೂರ ಪ್ರಸಿಡೆನಸ್ಸಿ ಕ್ಲಬ್ ನಲ್ಲಿ ಆಯೋಜಿಸಿದ್ದು ಶ್ರೀ ಶ್ರೀ ಮಾದರ ಬಸವಮೂರ್ತಿ ಚನ್ನಯ್ಯ ಸ್ವಾಮೀಜಿ ಹಾಗೂ ಆಹಾರ ಸಚಿವರು ಹಾಗೂ ಮಾದರ ಮಹಾಸಭಾದ ಅಧ್ಯಕ್ಷರಾದ ಕೆಹೆಚ್. ಮುನಿಯಪ್ಪ ಅಬಕಾರಿ ಸಚಿವರಾದ ತಿಮ್ಮಾಪುರ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಸಚಿವರು
ನಮ್ಮ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಈ ಮಾದರ ಮಹಾಸಭಾ ಅತ್ಯವಶ್ಯಕವಾಗಿದೆ ರಾಜ್ಯದಲ್ಲಿ ಹಂತ ಹಂತವಾಗಿ ಜಿಲ್ಲಾ, ತಾಲ್ಲೂಕು,ಮಟ್ಟದ ಸಮಿತಿಗಳನ್ನು ರಚಿಸಲಿದ್ದು ಮಹಾಸಭಾದ ಸದಸ್ಯರಾಗಿ ನೊಂದಣಿ ಕಾರ್ಯದಲ್ಲಿ ಪ್ರತಿ ಕುಟುಂಬದಲ್ಲಿ ಒಬ್ಬರನ್ನು ನೊಂದಣಿ ಮಾಡಿಕೊಳ್ಳಬೇಕು ಎಂದರು.

ನಾಗಮೋಹನ್ ದಾಸ್ ವರದಿ ಸ್ಪಷ್ಟವಾಗಿ ಸಮುದಾಯದ ಸಮಸ್ಯೆಗಳು ಮತ್ತು ಪರಿಹಾರ ಮಾರ್ಗಗಳನ್ನು ಸೂಚಿಸಿದೆ ಪ್ರತಿಯೊಂದು ಮನೆಯಲ್ಲಿಯೂ ಕನಿಷ್ಠ ಒಬ್ಬ ಸದಸ್ಯ ಮಾದಾರ ಮಹಾಸಭೆಯಲ್ಲಿ ನೊಂದಣಿ ಮಾಡುವ ಮೂಲಕ ಸೇರಬೇಕು.

ನಮ್ಮ ಸಮುದಾಯದ ಸುಮಾರು 45 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ಸಹನಾವು ಪರಿಶಿಷ್ಟ ಜಾತಿಯ ಸಮೀಕ್ಷೆಯ ಸಂದರ್ಭದಲ್ಲಿ ನಾವು ನೋಂದಣಿ ಮಾಡಿಸಲು ಆಗಲಿಲ್ಲಾ ಆದ ಕಾರಣ ನಾವು ಮೀಸಲಾತಿಯಲ್ಲಿ 6,6,5 ಅನ್ನು ಹಂಚಿಕೊಳ್ಳಬೇಕಾಯಿತು

ಬೆಂಗಳೂರು ನಗರದಲ್ಲಿಯೇ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ನೊಂದಣಿ ಮಾಡಿಸದೆ ಹೊರಗಿಳಿದಿದ್ದಾರೆ ಮುಂದಿನ 2026ರ ಕೇಂದ್ರ ಸಮೀಕ್ಷೆಯಲ್ಲಿ ತಾವು ತಪ್ಪದೆ ನೊಂದಣಿ ಮಾಡಿಸಬೇಕು ಎಂದರು.

ನೊಂದಣಿ ಮಾಡಿಸಿದಾಗ ನಮ್ಮ ಸಮುದಾಯದ ಜನಸಂಖ್ಯೆಯ ಬಲ ಗೊತ್ತಾಗುತ್ತದೆ ಈ ಸಂಘಟನೆಯಲ್ಲಿ ಸೇರುವ ಮೂಲಕ ಸಂಗ್ರಹವಾಗುವ ಸದಸ್ಯತ್ವ ನಿಧಿಯನ್ನು ಸಂಪೂರ್ಣ ಠೇವಣಿ ರೂಪದಲ್ಲೇ ಉಳಿಸಿ, ಅದರ ಬಡ್ಡಿ ಆದಾಯವನ್ನು ಬಡ ಹಾಗೂ ಮೆರಿಟ್ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದಕ್ಕೆ ಬಳಸಲಾಗುತ್ತದೆ ಎಂದರು ಇದರಿಂದ
ಐಎಎಸ್, ಕೆಎಎಸ್, ಡಾಕ್ಟರ್, ಎಂಜಿನಿಯರ್ ಆಗಬೇಕೆಂದು ಬಯಸುವ ನಮ್ಮ ಮಕ್ಕಳು ಬಲ ಪಡೆದಾಗ ಮಾತ್ರ ಸಾದ್ಯ

ಮುಂದಿನ ಒಂದು ತಿಂಗಳಲ್ಲಿ ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಮಹಾಸಭೆಯ ಸಮಿತಿಗಳು ಪೂರ್ಣಗೊಳ್ಳಲಿವೆ. ಗಾಂಧಿ ಭವನದ ಎದುರು ಕೇಂದ್ರ ಕಚೇರಿ ಸ್ಥಾಪನೆಗೊಂಡಿದ್ದು, ಇದಕ್ಕಾಗಿ 2 ಕೋಟಿ ರೂಪಾಯಿ ಠೇವಣಿ ಮಾಡಲಾಗಿದೆ ಅದು ಸಮುದಾಯದ ಏನೇ ಸಮಸ್ಯೆಗಳು ಇದ್ದರೂ ನಾವೆಲ್ಲಾರೂ ಇದ್ದೇವೆ ಎಂದು ಈ ಸಮುದಾಯದ ಕಛೇರಿಯನ್ನು ನಿರ್ಮಿಸಿದ್ದೇವೆ ಎಂದರು.

ಈಗ ಆಯ್ಕೆಯಾಗಿರುವ ಜಿಲ್ಲಾ ಅಧ್ಯಕ್ಷರು ಕಾರ್ಯಕಾರಣಿ ಸದಸ್ಯರು ಅಡಾಕ್ ಕಮಿಟಿ ಅಷ್ಟೇ ಮುಂದಿನ 6 ರಿಂದ 8 ತಿಂಗಳೊಳಗೆ ಪ್ರಜಾಪ್ರಭುತ್ವದ ಮೂಲಕ ಚುನಾವಣೆ ನಡೆಯಲಿದ್ದು, ನೊಂದಣಿ ಮಾಡಿರುವ ಸದಸ್ಯರು ಮತವನ್ನು ಚಲಾಯಿಸುವ ಮೂಲಕ ರಾಜ್ಯ–ಜಿಲ್ಲಾ–ತಾಲೂಕು ಮಟ್ಟದ ನಾಯಕರನ್ನು ಆರಿಸಲಾಗುವುದು ಎಂದು ಸಚಿವರು ಪ್ರಕಟಿಸಿದರು.

ತಾಲ್ಲೂಕು–ಜಿಲ್ಲಾ ಮಟ್ಟದಲ್ಲಿ ಸಂಘಟನೆಯ ಬಲವನ್ನು ಹೆಚ್ಚಿಸಲು ಯುವಕರನ್ನು ಕೂಡಿಸಿ ಕೆಲಸ ಮಾಡುತ್ತಿರುವ
ದುರ್ಯೋಧನ ಹೈಹೊಳೆ ರವರ ಹಾಗೆ ನಮ್ಮ ನಾಯಕರು ಹೆಚ್ಚು ನೊಂದಣಿ ಮಾಡಿಸಬೇಕು ಎಂದರು

ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು— ಎಲ್ಲೆಡೆ ಸಮಿತಿಗಳು ರಚನೆಯಾಗುತ್ತಿವೆ. ಹಿರಿಯ ನಾಯಕರು ರಮೇಶ್, ತಿಮ್ಮಯ್ಯ, ಕೋಟೆ ಶಿವಣ್ಣ ಹಾಗೂ ಇತರರು ಸಂಘಟನೆಯನ್ನು ಬಲಪಡಿಸುತ್ತಿದ್ದಾರೆ.

ಈ ಸಮುದಾಯದ ಶೈಕ್ಷಣಿಕ–ಸಾಮಾಜಿಕ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಅಗತ್ಯ.
ನಿಂತಾಗ ಮಾತ್ರ ನಮ್ಮ ಬಲ ಜಗತ್ತಿಗೆ ಗೋಚರಿಸುತ್ತದೆ ಎಂದರು.

ಇದೆ 11 ರ ಕ್ಯಾಬಿನೆಟ್ ನಲ್ಲಿ ಒಳಮೀಸಲಾತಿ ಬಿಲ್ಲಿನ ಬಗ್ಗೆ ಚರ್ಚೆ ನಡೆಯಲಿದ್ದು ಬೆಳಗಾವಿಯ ಅಧಿವೇಶನದಲ್ಲಿ ಒಳಮೀಸಲಾತಿ ಯ ವಿದೇಯಕ ಮಂಡನೆಯಾಗಲಿದೆ ಎಂದರು
ಅಲೆಮರಿ ಸಮುದಾಯಕ್ಕೆ ಯಾವುದೆ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿದ್ದು ಎಲ್ಲಾ ಸಮುದಾಯದಕ್ಕೂ ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಮಾದರ ಚನ್ನಯ್ಯ ಸ್ವಾಮೀಜಿ, ಅಬಕಾರಿ ಸಚಿವರಾದ ತಿಮ್ಮಾಪೂರ,ಮಾಜಿ ಸಚಿವರಾದ ಹೆಚ್.ಆಂಜನೇಯ, ಮಾಜಿ ಸಂಸದರಾದ ಚಂದ್ರಪ್ಪ ಹಾಗೂ ಶಾಸಕರಾದ ಡಿ.ತಿಮ್ಮಯ್ಯ,ನೆಲಮಂಗಲ ಶಾಸಕರಾದ ಶ್ರೀನಿವಾಸ ,ಮಾಜಿ ಶಾಸಕಾರಾದ ತಿಮ್ಮರಾಯಪ್ಪ, ಆಧಿಜಾಂಭವ ನಿಗಮದ ಅಧ್ಯಕ್ಷರಾದ ಮಂಜುನಾಥ್,ಮಾಜಿ ಶಾಸಕರಾದ ದರ್ಮಸೇನ್,ಗಂಗನುಮಯ್ಯ ,ಸಿ.ರಮೇಶ್ ,ಎ.ಮುನಿಯಪ್ಪ ಹಾಗೂ ಕಾರ್ಯಕಾರಣಿ ಸದಸ್ಯರು ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!