filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 128;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 53;
ಬೆಳಗಾವಿ-11 : ಜಾನುವಾರುಗಳ ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ತಿದ್ದಪಡೆ ಮಾಡಿ, ವಿಧಾನ ಸಭೆಯಲ್ಲಿ ಮಂಡಿಸುವುದಕ್ಕೆ ಸಿದ್ದವಾಗಿರುವ ಸರಕಾರದ ವಿರುದ್ದ ವಿಶ್ವ ಹಿಂದು ಪರಿಷತ್ ಬಜರಂಗದಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭನೆ ನಡೆಸಿ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ರ್ಯಾಲಿ ಮೂಲಕ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ರಾಜ್ಯದಲ್ಲಿ ಗೋವುಗಳನ್ನು ಮಿತಿಮೀರಿ ಹತ್ಯೆ ಮಾಡಲಾಗುತ್ತಿರುವುದರ ಬಗ್ಗೆ ವಿಶ್ವ ಹಿಂದು ಪರಿಷತ್ ಬಜರಂಗದಳ ಜಿಲ್ಲಾಧ್ಯಕ್ಷ ಪ್ರಮೋದ್ ಕುಮಾರ್ ವಕ್ಕುಂದಮಠ ಮಾತನಾಡಿ, ಕಾಂಗ್ರೆಸ್ ಸರಕಾರವು ಗೋ ಹತ್ಯೆ ಕಾಯ್ದೆ ತಿದ್ದುಪಡೆ ಮಾಡುವುದಕ್ಕೆ ಹೋರಟಿರುವ ವಿರುದ್ದ ರಾಜ್ಯಾಧ್ಯಂತ ವಿಶ್ವ ಹಿಂದು ಪರಿಷತ್ ಉಗ್ರವಾಗಿ ಹೊರಾಟ ಮಾಡುತ್ತಿದೆ. ೨೦೨೧ ರಲ್ಲಿ ಗೋ ಹತ್ಯೆ ಕಾಯ್ದೆ ನಿಷೇಧ ಮಾಡಲಾಗಿತ್ತು ಅವಾಗಿನಿಂದ ಸ್ವಲ್ಪ ಮಟ್ಟಿಗೆ ಕಡೆವೆ ಯಾಗಿತ್ತು ಆದರೆ , ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ರಾಜ್ಯದಲ್ಲಿ ಗೋ ಹತ್ಯೆ ನಿರಂತವಾಗಿ ಒಂದು ಸಮುದಾಯದ ಓಲೈಕೆಗಾಗಿ ಸರಕಾರ ಗೋ ಹತ್ಯೆ ಕಾಯ್ದೆ ತಿದ್ದಪಡೆ ಮಾಡುವುದಕ್ಕೆ ತಿರ್ಮಾಣಿಸಿರುವುದಕ್ಕೆ ರಾಜ್ಯಾಧ್ಯಂತ ವಿರೋಧ ವ್ಯಕ್ತವಾಗುತ್ತಿದೆ ಎಂದು ಆರೋಫಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರ ಕೂಡಲೇ ಈ ವಿಚಾರವನ್ನು ಇಲ್ಲಿಗೆ ಕೈ ಬಿಡಬೇಕು ಇಲ್ಲವಾದರೆ, ಅಧಿವೇಶನದ ವೇಳೆ ಸುವರ್ಣಸೌಧ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ಪ್ರತಿಭಟನೆಯ ಮೂಲಕ ರಾಜ್ಯ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ಈ ವೇಳೆ ವಿಶ್ವ ಹಿಂದು ಪರಿಷತ್ ಬಜರಂಗದಳ ಜಿಲ್ಲಾಧ್ಯಕ್ಷ ಪ್ರಮೋದ ಕುಮಾರ್ ವಕ್ಕುಂದಮಠ, ನಗರ ಅಧ್ಯಕ್ಷ ಆನಂದ ಕರ್ಲಿಂಗಣ್ಣವರ, ಸ್ವರೂಪ ಕಾಲಕುಂದ್ರಿ, ನಾಗೇಶ ಕಂಬಳೆ , ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಲ್ಲಿ ಉಪಸ್ಥಿತರಿದ್ದರು.
