ಬೆಳಗಾವಿ-05 : ಇಲ್ಲಿನ ಸುವರ್ಣಸೌಧದ ಎದುರು 108 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪಿಸುವಂತೆ ಆಗ್ರಹಿಸಿ, ಸವೋದಯ ಸ್ವಯಂ ಸೇವಾ ಹಾಗೂ ಬೆಳಗಾವಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರ್ಯಾಲಿ ಮೂಲಕ ತೆರಳಿ ಜಿಲ್ಲಾಧಿಕಾರಿಗಳ ತಿಳಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಭುವನೇಶ್ವರಿ ತಾಯಿಯ ಪ್ರತಿಮೆ ಸ್ಥಾಪಿಸಿ ರೀತಿಯಲ್ಲಿಯೇ ಬೆಳಗಾವಿಯ ಸುವರ್ಣಸೌಧದ ಬಳಿ 108 ಅಡಿ ಕಿಂತ ಹೆಚ್ಚು ಎತ್ತರದ ಪ್ರತಿಮೆ ಸ್ಥಾಪಿಸಬೇಕೆಂದು ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡರು.
ಈ ವೇಳೆ ಶ್ರೀನಿವಾಸ ತಾಳೂಕರ್, ಆನಂದ ಲೋಕಾರಿ, ಸಿದ್ದಪ್ಪ, ಮಲ್ಲಪ್ಪ ಹೊಟ್ಟಕ್ಕೆ, ಗುರು ಕಳ್ಳಿಮನಿ, ಹನುಮಂತ ಬುಚ್ಚದಿ, ರುದ್ರಪ್ಪ ಕಾಮ್ಕರ್ ಮಹದೇವ್ ಕೋಳಿ, ಸೇರಿದಂತೆ ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು.
