ಬೆಳಗಾವಿ-03 : ನಗರದಲ್ಲಿ ಬೀದಿ ಬದಿಗಳಲ್ಲಿ ಕುಳಿತು ವ್ಯಾಪಾರ ಮಾಡುವ ಬಡ ವ್ಯಾಪಾರಿಗಳಿಂದ ಭೂಬಾಡಿಗೆ ರೂಪದಲ್ಲಿ ಹೆಚ್ಚು ಹಣ ಸಂಗ್ರಹ ಮಾಡುತ್ತಿದ್ದು, ಅದೂ ನಡೆಯಲಿಕ್ಕೆ ಬಾರದ ದಿವ್ಯಾoಗ (ಅಂಗವಿಕಲ) ವ್ಯಾಪಾರಿ ಹತ್ತಿರ ಒತ್ತಾಯ ಪೂರ್ವಕವಾಗಿ ಭೂಬಾಡಿಗೆ ಸಂಗ್ರಹದ ಮಾಡಿದ ವಿಷಯಕ್ಕೆ, ಪಾಲಿಕೆಯ ಆಡಳಿತ ಪಕ್ಷ ಹಾಗೂ ಪಾಲಿಕೆಯ ಅಧಿಕಾರಿಗಳ ವಿರುದ್ಧ ಶಾಸಕ ಆಶಿಫ್ (ರಾಜು) ಸೇಠ್ ಅವರು ಕೆಂಡಾಮಂಡಲವಾದ ಸಂಗತಿ ಪಾಲಿಕೆಯ ಪರಿಷತ ಸಭೆಯಲ್ಲಿ ಜರುಗಿದೆ..ಮಂಗಳವಾರ ದಿನಾಂಕ 02/12/2025 ರಂದು ಬೆಳಗಾವಿ ಪಾಲಿಕೆಯ ಪರಿಷತ್ ಸಭಾಭವನದಲ್ಲಿ ನಡೆದ ಪಾಲಿಕೆಯ ಪರಿಷತ್ ಸಭೆಯಲ್ಲಿ ಭೂಬಾಡಿಗೆ ಸಂಗ್ರಹದ ವಿಷಯವಾಗಿ ಒಬ್ಬ ದಿವ್ಯಾoಗ ವ್ಯಾಪಾರಿಯ ಹತ್ತಿರ ಭೂಬಾಡಿಗೆ ವಸೂಲಿ ಮಾಡುವ ಅವಶ್ಯಕತೆ ಇತ್ತೇ ಎಂದು ಪ್ರಶ್ನೆ ಮಾಡಿದಾಗ, ಅದ್ದಕೆ ಧ್ವನಿಗೂಡಿಸಿದ ನಗರ ಸೇವಕ ರವಿ ಸಾಲುಂಕೆ ಅವರು, ಭೂಬಾಡಿಗೆ ವಸೂಲಿ ಗುತ್ತಿಗೆದಾರರಿಗೆ ಒತ್ತಾಯ ಮಾಡಿ ಹಣ ಸಂಗ್ರಹ ಮಾಡಲು ಹೇಳಿದ್ದು ಯಾರು? ಅಂಗವಿಕಲ ವ್ಯಾಪಾರಿ ಹತ್ತಿರ ಕಡ್ಡಾಯವಾಗಿ ವಸೂಲಿ ಮಾಡುವ ಅವಶ್ಯಕತೆ ಏನಿತ್ತು? ಆ ವ್ಯಾಪಾರಿ ಇಂದು ಪಾಲಿಕೆಯ ಎದುರು ಬಂದು ಕುಳಿತಿದ್ದಾನೆ, ಅವನಿಗೆ ಮಾತನಾಡಲೂ, ನಿಲ್ಲಲು ಸಹ ಬರುವದಿಲ್ಲ, ಗುತ್ತಿಗೆದಾರ ತನ್ನ ಮನಬಂದಂತೆ ಮಾಡಿದರೆ ಹೇಗೆ ಎಂದು ಪ್ರಶ್ನೆ ಮಾಡಿದರು..
ಇದಕ್ಕೆ ಉತ್ತರಿಸಿದ ಮಹಾಪೌರರು ಈಗಾಗಲೇ ಅಧಿಕಾರಿಗಳು ಹಾಗೂ ವ್ಯಾಪಾರಿ ವಲಯಗಳ ಸಮಿತಿ ಸದಸ್ಯರ ಜೊತೆ ಎರಡು ಸಭೆಗಳನ್ನು ಮಾಡಿದ್ದೇವೆ ಅದರಲ್ಲಿ ದಿವ್ಯಾoಗ ವ್ಯಾಪಾರಿಗಳಿಂದ ಹಣ ಸಂಗ್ರಹ ಮಾಡಬಾರದೆಂದು ಹೇಳಿದ್ದೇವೆ, ಅದು ಕಾರ್ಯರೂಪಕ್ಕೆ ಬರಬೇಕು ಅಷ್ಟೇ ಎಂದರು..
