ಬೆಳಗಾವಿ-20: ನವೆಂಬರ್ 21 ರಂದು ನಿವೃತ್ತರಿಗಾಗಿ ವಿಶೇಷ ಶಿಬಿರ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ವತಿಯಿಂದ
ಬೆಳಗಾವಿ ಮುಖ್ಯ ಅಂಚೆ ಕಚೇರಿ (ರೈಲ್ವೆ ನಿಲ್ದಾಣ ಹತ್ತಿರ) ಆವರಣದಲ್ಲಿ ನವೆಂಬರ್ 21 ರಂದು ನಿವೃತ್ತ ಪಿಂಚಣಿದಾರರಿಗಾಗಿ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ₹70 ಶುಲ್ಕದಲ್ಲಿ ಜೀವನ ಪ್ರಮಾಣಪತ್ರ (Digital Life Certificate – DLC) ಸಲ್ಲಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲಾ ಇಲಾಖೆಗಳ ಪಿಂಚಣಿದಾರರು ಸ್ಥಳಕ್ಕೆ ಬಂದು ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಿಕೊಳ್ಳಬಹುದು.
ಇದೇ ಸಂದರ್ಭದಲ್ಲಿ ನಿವೃತ್ತರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನೂ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಿಂಚಣಿದಾರರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಆಯೋಜಕರು ವಿನಂತಿಸಿದ್ದಾರೆ.
