ಬೆಳಗಾವಿ-10 :ಸೋಮವಾರ ಬೆಳಗಾವಿ ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪ್ರತಿ ತಿಂಗಳು ಸರಿಯಾಗಿ ಮಾಸಿಕ ವೇತನ ನೇರವಾಗಿ ಖಾತೆಗೆ ಜಮೆ ಮಾಡಬೇಕು ಹಾಗೂ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯತಿ ಗ್ರಂಥಾಲಯ ಗ್ರಂಥ ಪಾಲಕರು ಮತ್ತು ಮಾಹಿತಿ ಸಹಾಯಕರ ಸಂಘಟನೆ ನೇತ್ರತ್ವದಲ್ಲಿ ಗ್ರಂಥ ಪಾಲಕರು
ಬೃಹತ್ ನಡೆಸಿದರು.
ಸೋಮವಾರ ನಗರದ ಚನ್ನಮ್ಮ ವೃತ್ತದಲ್ಲಿ ಜಮೆಗೊಂಡು ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಪ್ರತಿಭಟನಾ ರ‌್ಯಾಲಿ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದರು.
ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ, ಗ್ರಂಥಾಲಯ ಇಲಾಖೆಯ ಸಿಬ್ಬಂದಿಗಳಿಗೆ ಇಲಾಖೆಯೂ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ಕನಿಷ್ಠ ವೇತನವನ್ನು ನೇರವಾಗಿ ಖಾತೆಗೆ ಜಮಾ ಮಾಡುವುದಿಲ್ಲ. 12 ಸಾವಿರ ರೂಪಾಯಿ ಪಾವತಿಸಿ ಬಾಕಿ ವೇತನವನ್ನು ಧನಾದೇಶದ ಮೂಲಕ ತೆಗೆದುಕೊಳ್ಳಲು ಆದೇಶಿಸಲಾಗಿದೆ. ಇದರಿಂದ ಬಾಕಿ ಉಳಿದುಕೊಂಡಿದೆ. 3 ತಿಂಗಳಿಗೊಮ್ಮೆ ವೇತನ ಪಾವತಿಯಾಗುತ್ತಿದ್ದು, ಇದರಿಂದ ನೌಕರರಿಗೆ ತಮ್ಮ ಕುಟುಂಬದ ಖರ್ಚು ವೆಚ್ಚಗಳು ನೋಡಿಕೊಳ್ಳುವುದಕ್ಕೆ ತೊಂದರೆ ಯಾಗುತ್ತಿದೆ ಎಂದು ಪ್ರತಿಭಟನೆಯ ಅಸಮಾಧಾನ ಹೊರ ಹಾಕಿದರು.
ಈಗಾಗಲೇ ಬೆಂಗಳೂರುt ಗ್ರಾಮಾಂತರ ಮತ್ತು ಕಲ್ಬುರ್ಗಿಯಲ್ಲಿ ಇಬ್ಬರು ನೌಕರರು ಕಿರುಕುಳಕ್ಕೆ ಬೇಸತ್ತು ಗ್ರಂಥಾಲಯದ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿತಿಂಗಳ 5ನೇ ತಾರೀಖು ವೇತನವನ್ನು ಜಮೆ ಮಾಡಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೇ, ಬೆಳಗಾವಿಯ ಚಳಿಗಾಲದ ಅಧಿವೇಶನದ ವೇಳೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಗ್ರಾಮೀಣ ಗ್ರಂಥಾಲಯ ನೌಕರರ ಸಂಘದ ಉಪಾಧ್ಯಕ್ಷ ಶಂಕ್ರಯ್ಯಾ ಮಠಪತಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಈ ವೇಳೆ ಕೆ.ವಿ. ಸತ್ಯನಾರಾಯಣ್, ಭಾರತಿ ನಾಝರೆ, ಕೆ.ಸಿ. ಮೋಹನ್, ಶಿವರಾಮೇಗೌಡ, ಕೆ.ಬಿ. ರಾಮನಗೌಡ, ಪುಂಡಲೀಕ ಬಾಲಯ್ಯಗೋಳ, ಶ್ರೀರಾಮ ಡಿ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.
