ಬೆಳಗಾವಿ-02 :ಫೆಬ್ರುವರಿ ,23 ,24 ಹಾಗೂ 25ರಂದು ವೇದಿಕೆಯ ಟ್ರಸ್ಟ ವತಿಯಿಂದ ವೀರಶೈವ ಲಿಂಗಾಯತ ಜಾಗತಿಕ ಉದ್ದಿಮೆ ಮೇಳವನ್ನು 2024 ಅನ್ನು ಹುಬ್ಬಳ್ಳಿಯ ವಿದ್ಯಾನಗರದ ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂಬ ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ವೇದಿಕೆಯ ಅಧ್ಯಕ್ಷರಾದ ಅವಿನಾಶ್ ಪಾಳೇಗಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಶುಕ್ರವಾರ ನಗರದಲ್ಲಿ ಕರೆಯಲಾಗಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ವ್ಯಾಪಾರ ಉದ್ದಿಮೆಯ ಸಮಾವೇಶದ ಪ್ರಮುಖ ಅಂಶಗಳೆಂದರೆ,
ಜಗತ್ತಿನ ವೀರಶೈವ ಲಿಂಗಾಯತ ಸಮುದಾಯದ ಉದ್ಯಮ ದಿಗ್ಗಜರನ್ನು ಒಂದೇ ಸೂರಿನಡಿ ತಂದು, ಕರ್ನಾಟಕದಲ್ಲಿ ಹೂಡಿಕೆಯ ಅವಕಾಶದ ಬಗ್ಗೆ ಚರ್ಚಿಸುವುದು,
ಸರ್ಕಾರದ ಕ್ಲಸ್ಟರ್ ಆಧಾರಿತ ವಿಧಾನವನ್ನು ವ್ಯಾಪಾರ, ಉದ್ದಿಮೆ, ಹಾಗೂ ರೈತ ಸಮುದಾಯಕ್ಕೆ ವಿಸ್ತರಿಸುವುದು, ನಿರೀಕ್ಷಿತ ಉದ್ದಿಮೆಗಳಿಗೆ ಮಾರ್ಗದರ್ಶನ ನೀಡುವದು,
ರೈತರು ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ತಂತ್ರಜ್ಞಾನ ಆಧಾರಿತ ಕೃಷಿ ಪರಿಹಾರಗಳನ್ನು ಅನ್ವೇಷಿಸುವದು ಹಾಗೂ 150 ಕ್ಕೂ ಅಧಿಕ ಮಳಿಗೆಗಳಲ್ಲಿ ಉತ್ಪನ್ನ ಹಾಗೂ ಸೇವೆಗಳನ್ನು ಪ್ರದರ್ಶನ ಮಾಡುವದರ ಮೂಲಕ ರಾಜ್ಯದ ಸಾಮರ್ಥ್ಯವನ್ನು ಪ್ರದರ್ಶಿಸುವುದು ಎಂದು ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಸದಸ್ಯರಾದ ರಮೇಶ ಪಾಟೀಲ್, ರವಿರಾಜ್ ಕಮ್ಮಾರ, ಜಗದೀಶ್ ನಾಯಕ್, ಗೌಡೇಶ್ ಪಾಟೀಲ್, ಬಸನಗೌಡ ಪಾಟೀಲ್, ಹಾಗೂ ಗಿರೀಶ್ ಮತ್ತಿಕೊಪ್ಪ ಹಾಜರಿದ್ದರು.