ಬೆಳಗಾವಿ-06: ಕಬ್ಬು ಬೆಳೆಗಾರರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಒಂದು ವಾರಗಳಿಂದ ಅಹೋರಾತ್ರಿ ಹೋರಾಟ ಮಾಡುತ್ತಿದ್ದಾರೆ. ನ.7 ರಂದು ಕಬ್ಬಿನ ಬೆಂಬಲ ಬೆಲೆ ಘೋಷಣೆ ಮಾಡಲಿಲ್ಲ ಎಂದರೆ ಬೆಳಗಾವಿ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ ಎಂದು ಕರವೇ ರಕೆ ಕೊಟ್ಟಿದೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕುಡಿ ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ರೈತಾಪಿ ವರ್ಗವು ತಮ್ಮ ಬೇಡಿಕೆಯನ್ನು ಅಗ್ರಹಿಸುವಂತೆ ಸರಕಾರ ಬಳಿ ಬೇಡುತ್ತಿದೆ ಹೊರತು ಬೇರೇನಿಲ್ಲ, ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಕಬ್ಬಿಗೆ ಬೆಳೆಗೆ ಬೆಂಬಲ ಬೆಲೆ ಕೇಳುತ್ತಿದ್ದಾರೆ ಅಷ್ಟೇ. ಅವರ ಹೋರಾಟಕ್ಕೆ ಸರಕಾರ ಕೂಡಲೇ ಸ್ಪಂದಿಸಬೇಕಾಗಿತ್ತು, ಆದರೆ ಏನೋ ನಡೆದಿಲ್ಲ ಅನ್ನುವ ರೀತಿಯಲ್ಲಿ ಸರಕಾರ ವರ್ತಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ರೈತರ ಅಹೋರಾತ್ರಿ ಹೋರಾಟಕ್ಕೆ ರಾಜ್ಯ ಸರಕಾರ ಕಬ್ಬಿಗೆ ಬೆಂಬಲ ಬೆಲೆ ಕೊಡಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು, ಜಿಲ್ಲಾಧಿಕಾರಿಗಳು ಬಗೆಹರಿಸುತ್ತಾರೆ ಎಂದು ಹೇಳಿ ಪಲಾಯನ ಮಾಡಿದ್ದಾರೆ.
ಹಾಗಾದರೆ ನಿಮ್ಮ ಜವಾಬ್ದಾರಿ ಏನು ರೈತರ ಕಷ್ಟಗಳಿಗೆ ಸ್ಪಂದಿಸುವವರು ಯಾರು, ಎಂದು ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಪ್ರಶ್ನೆ ಮಾಡಿದರು.
ನ.7 ರ ಒಳಗಾಗಿಯೇ ಕಬ್ಬಿನ ಬೆಂಬಲ ಬೆಲೆ 3500 ರೂ ನೀಡದಿದ್ದರೆ. ಬೆಳಗಾವಿ ಸಂಪೂರ್ಣವಾಗಿ ಬಂದ್ ಮಾಡಿ ರೈತರ ಹೋರಾಟಕ್ಕೆ ಸಾಥ್ ನೀಡುತ್ತೆವೆ ಎಂದು ಸರಕಾರ ಕೂಡಲೇ ಎಚ್ಚೆತ್ತುಕೊಂಡು ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಎಚ್ಚರಿಕೆ ನೀಡಿದರು.
