11/12/2025
IMG-20251025-WA0003

ಕಿತ್ತೂರು-25:ಶಾಲಾ ಶಿಕ್ಷಣ ಇಲಾಖೆಯ ಚನ್ನಮ್ಮನ ಕಿತ್ತೂರ ಘಟಕವು ತಾಲೂಕಿನ ಎಲ್ಲಾ ಆರನೇ ಮತ್ತು ಏಳನೇ ತರಗತಿಗಳಲ್ಲಿ ಮೂಲಸಾಕ್ಷರತೆ ಮತ್ತು ಸಂಖ್ಯಾಜ್ಞಾನ (Foundational Literacy and Numeracy) ಸಾಧನೆಗಾಗಿ ಪ್ರಥಮ್ ಫೌಂಡೇಶನ್ ಸಹಯೋಗದಲ್ಲಿ ವಿಶೇಷ ತರಗತಿಗಳನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮವು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅದರ ಪ್ರಗತಿ ವರದಿಯನ್ನು ಉತ್ಸವದ ಸಂದರ್ಭದಲ್ಲಿ ಶಾಸಕರಾದ ಬಾಬಾಸಾಹೇಬ್ ಪಾಟೀಲ ಬಿಡುಗಡೆ ಮಾಡಿದರು.

IMG 20251022 125735 - IMG 20251022 125735

ಈ ಸಂದರ್ಭದಲ್ಲಿ ಜಿಲ್ಲಾ ಉಪನಿರ್ದೇಶಕರಾದ ಲೀಲಾವತಿ ಹೀರೆಮಠ, ಜಿಲ್ಲಾ ಶಿಕ್ಷಣಾಧಿಕಾರಿಗಳಾದ ರವಿ ಭಜಂತ್ರಿ, ಖಾನಾಪೂರದ ರಾಮಪ್ಪ ಬೆಳಗಾವಿ, ಗ್ರಾಮೀಣ ವಿಭಾಗದ ಆಂಜನೇಯ ಸರ್, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಬಿಆರ್‌ಪಿಗಳಾದ ಸ್ನೇಹಲ್ ಪೂಜಾರ, ಸುನೀತಾ ಪರಪ್ಪನ್ನವರ, ಜ್ಯೋತಿ ಕೋಟಗಿ, ಡಿ.ಎಚ್. ಪಾಟೀಲ ಮತ್ತು ಸಿಆರ್‌ಪಿಗಳಾದ ಸಂಜೀವ ಹುಬ್ಬಳ್ಳಿ, ವಿನಾಯಕ ಲಕನಗೌಡರ, ವಸೀಮಾ ಬಾನು, ವಿನೋದ ಪಾಟೀಲ, ನಾಗೇಶ ರಾವಳ, ಎಸ್.ಎಚ್. ಪಾಟೀಲ, ವೀರಣ್ಣ ದಾನನ್ನವರ ಹಾಜರಿದ್ದರು.

error: Content is protected !!