11/12/2025
IMG_20251025_163436

ಮಂಡ್ಯ-25:ಮಂಡ್ಯ ತಾಲ್ಲೂಕಿನ ಮಂಗಲದ ಲಕ್ಷ್ಮಮ್ಮ ಮತ್ತು ಎಂ.ಕೆ ಶಿವಣ್ಣ ಅವರ ಮಗಳು ಯಶಸ್ವಿನಿ ಎಂ.ಎಸ್. ಮತ್ತು ಹುಲ್ಕೆರೆಕೊಪ್ಪಲು ಗ್ರಾಮದ ಸುಶೀಲಮ್ಮ ಮತ್ತು ಚಿಂದೇಗೌಡರ ಮಗ ಸಿ.ಸೋಮಶೇಖರ್ ಅವರು ಶುಕ್ರವಾರ ಬೆಳಿಗ್ಗೆ ಸಸ ನೆಟ್ಟು, ರಕ್ತದಾನ ಮಾಡುವ ಮೂಲಕ ದಾಂಪತ್ಯಕ್ಕೆ ಕಾಲಿಟ್ಟರು.

IMG 20251022 125735 - IMG 20251022 125735

ಮಂಡ್ಯ ತಾಲೂಕಿನ ಮಂಗಲ ಗ್ರಾಮದ ಮಲ್ಲೇಶ್ವರಸ್ವಾಮಿ ಸಮುದಾಯ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪರಿಕಲ್ಪನೆಯಂತೆ ಶ್ರೀನಾದನಂದನಾಥಸ್ವಾಮಿ, ನಟ ಚೇತನ್ ಅಹಿಂಸಾ ಹಾಗೂ ನಟಿ ಪೂಜಾಗಾಂಧಿ ಸೇರಿದಂತೆ ಇತರ ಗಣ್ಯರ ಸಮ್ಮುಖದಲ್ಲಿ ಮಂತ್ರ ಮಾಂಗಲ್ಯ ಮದುವೆ ಆಗುವ ಮೂಲಕ ಅರ್ಥಪೂರ್ಣ ಸಂಸಾರಿಕ ಹಾದಿಯನ್ನು ತುಳಿದರು.

ನಟ ಚೇತನ್ ಅಹಿಂಸಾ ಮಾತನಾಡಿ ಕುವೆಂಬ ಅವರ ಪರಿಕಲ್ಪನೆಯ ಮದುವೆ ಸಮಾಜಕ್ಕೆ ಮಾದರಿಯಾದದ್ದು, ಈ ಮೂಲಕ ಯುವ ಜನರು ಬುದ್ದ, ಬಸವ, ಅಂಬೇಡ್ಕರ್, ಪೆರಿಯಾರ್ ಹಾಗೂ ಕುವೆಂಪು ಅವರ ಆಶಯಗಳನ್ನು ಅರ್ಥ ಮಾಡಿಕೊಂಡು ಜಾರಿಗೆ ತರಬೇಕು, ಇಂತಹ ಬದಲಾವಣೆ ಎಲ್ಲ ಕಡೆಯಲ್ಲಿ ನಡೆಯಬೇಕಿದೆ ಎಂದು ನುಡಿದರು.

ಚಲನಚಿತ್ರ ನಟಿ ಪೂಜಾಗಾಂಧಿ ರಕ್ತದಾನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಮತ್ತೊಂದು ಜೀವ ಉಳಿಸಲು ರಕ್ತದಾನ ಮಾಡುವುದು ಶ್ರೇಷ್ಟ ಕಾರ್ಯ. ನಾನು ಕೂಡ ಮಂತ್ರ ಮಾಂಗಲ್ಯವನ್ನೇ ಆಯ್ದುಕೊಂಡು ಮದುವೆಯಾದೆ, ಅದೇ ನಿಟ್ಟಿನಲ್ಲಿ ಸಾಗುತ್ತಿರುವ ಯಶಸ್ವಿನಿ ಹಾಗೂ ಸೋಮಶೇಖರ್ ಅವರ ದಾಂಪತ್ಯ ಯಶಸ್ವಿಯಾಗಿ ಸಾಗಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ‘ನಾವು ದ್ರಾವಿಡ ಕನ್ನಡಿಗರ ಚಳವಳಿ’ಯ ಅಭಿ ಒಕ್ಕಗಲಿಗ, ಅಲಯನ್ಸ್ ಸಂಸ್ಥೆಯ ಸೌತ್ ಉಪಾಧ್ಯಕ್ಷ ಕೆ.ಟಿ.ಹನುಮಂತು, ಕರ್ನಾಟಕ ಜನಶಕ್ತಿ ಎಂ.ಸಿದ್ದರಾಜು ಮಾತನಾಡಿ ವಧು-ವರರನ್ನು ಆರಸಿದರು.
ನೆಲದನಿ ಬಳಗದ ಆಧ್ಯಕ್ಷ ಎಂ.ಸಿ.ಲಂಕೇಶ್ ಮಂಗಲ, ಪೋಷಕರಾದ ರುಕ್ಮಿಣಿ ಶಂಕರೇಗೌಡ, ವೈದ್ಯ ಡಾ.ಎಚ್.ಎಸ್.ರವಿಕುಮಾರ್ ಮತ್ತಿತರರು ಹಾಜರಿದ್ದರು.

error: Content is protected !!