ಬೆಳಗಾವಿ-01: ದ್ವೀತಿಯ ಪಿಯುಸಿ ನಂತರದ ವಿದ್ಯಾಭ್ಯಾಸ ಅತೀ ಮಹತ್ವದ್ದಾಗಿದ್ದು, ಈ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ನಿಗಾ ವಹಿಸಿ ಉನ್ನತ ಶೀಕ್ಷಣ ಪಡೆಯುವಲ್ಲಿ ಮುಂದಕ್ಕೆ ಬರಬೇಕೆಂದು ಬೆಳಗಾವಿ ರಾಮಕೃಷ್ಣ ಮಿಶನ ಆಶ್ರಮದ ಮೋಕ್ಷಾತ್ಮನಂದಜಿ ಸ್ವಾಮಿಜಿ ಅವರು ಹೇಳಿದರು.
ಇಲ್ಲಿಯ ಭರತೇಶ ಶಿಕ್ಷಣ ಸಂಸ್ಥೆಯ ಭರತೇಶ ಪಿಯು ಮಹಾವಿದ್ಯಾಲಯದ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಐದು ವರ್ಷಗಳ ನಿರಂತರ ಅಧ್ಯಯನ ನಿಮ್ಮ ಜೀವನದ ದಿಕ್ನನ್ನು ಬದಲಿಸಬಲ್ಲದು. ಉತ್ತಮ ಆರೋಗ್ಯ, ಮಾನಸಿಕ ಸಕ್ಷಮತೆ, ಗುರಿ ಮುಟ್ಟುವ ಛಲದೊಂದಿಗೆ ಆತ್ಮವಿಶ್ವಾಸದೊಂದಿಗೆ ಮುನ್ನಡೆದರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾದ್ಯ ಎಂದು ಅವರು ತಿಳಿಸಿದರು.
ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸಮಾರಂಭದಲ್ಲಿ ರಾಷ್ಟç ಮಟ್ಟದ ಕ್ರಿಡೆಯಲ್ಲಿ ಆಯ್ಕೆಯಾದ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಅದರಂತೆ 2023-24 ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿಗಳೆಂದು ಆಯ್ಕೆಯಾದ ಲಕ್ಷಿö್ಮÃ ನಾಯ್ಕ, ಭೂಮಿ ಜಕ್ಕನ್ನವರ, ಶೃಷ್ಠಿ ಬುರಾನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಹಾವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಹೀರಾಚಂದ ಕಲಮನಿ , ಸದಸ್ಯರಾದ ಅಶೋಕ ಕಾಡಾಪೂರೆ, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.ಪ್ರಾಚಾರ್ಯ ಸುನಿತಾ ದೇಶಪಾಂಡೆ ಅತಿಥಿಗಳನ್ನು ಸ್ವಾಗತಿಸಿದರು. ಮಾಧವಿ ಪಾಟೀಲ ಪರಿಚಯಿಸಿದರು. ಸುಧಾ ಚಿಕ್ಕಮಠ, ಶೃಷ್ಠಿ ಹಾವಳ, ಸಾನಿಯಾ ನಧಾಫ ಕಾರ್ಯಕ್ರಮ ನಿರೂಪಿಸಿದರು. ಪೂನಮ ಪಾಟೀಲ ವಂದಿಸಿದರು.