ಕೊಳ್ಳೇಗಾಲ-24:ವಾಲ್ಮೀಕಿ ಸಮಾಜದ ಮುಖಂಡರನ್ನು ಸಾರ್ವಜನಿಕವಾಗಿ ನಿಂದಿಸಿರುವ ಮಾಜಿ ಸಂಸದ ರಮೇಶ್ ಕತ್ತಿ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿ ತಕ್ಷಣವೇ ಬಂಧಿಸಬೇಕೆಂದು ಇಲ್ಲಿನ ನಾಯಕ ಸಮುದಾಯದ ಯಜಮಾನರು ಒತ್ತಾಯಿಸಿದ್ದಾರೆ.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮೆರವಣಿಗೆ ಮೂಲಕ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ರಮೇಶ್ ಕತ್ತಿ ವಿರುದ್ಧ ದೂರನ್ನು ಎಎಸ್ಐ ನಂಜುಂಡಸ್ವಾಮಿ ರವರಿಗೆ ಸಲ್ಲಿಸಿದರು.

ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆ ಸಂಧರ್ಭ ರಮೇಶ್ ಕತ್ತಿ ಉದ್ದೇಶಪೂರ್ವಕವಾಗಿ ಬೇಡ ಜನಾಂಗದವರ ವಿರುದ್ಧ ಅಶ್ಲೀಲ ಪದ ಬಳಸಿ ಸಮುದಾಯವನ್ನು ಅಪಮಾನಿಸಿದ್ದಾರೆ. ಇದು ಸಾಮಾಜಿಕ ಜಾಲತಾಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದು, ನಾಯಕ ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ. ಆದ್ದರಿಂದ ರಮೇಶ್ ಕತ್ಯಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ವಿರುದ್ಧ ದೌರ್ಜನ್ಯ ಯಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ತಾಲ್ಲೂಕು ನಾಯಕ ಸಂಘದ ಅಧ್ಯಕ್ಷರು ಜಗದೀಶ್ ನಾಯಕ, ಕಸಬಾ ಮನೆ ಯಜಮಾನರು ಸುಂದರ್ ನಾಯಕ, ಕೊಪ್ಪಾಳಿ ಮಹದೇವ ನಾಯಕ, ಟೈಲರ್ ನಾಗರಾಜು, ಪಾಳ್ಯ ಕೃಷ್ಣ, ಕುನ್ನನಾಯಕ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯೆ ಕವಿತಾ, ಮುಡಿಗುಂಡ ನಾರಾಯಣ್, ಹಾಗೂ ನಾಯಕ ಜನಾಂಗದ ಮುಖಂಡರು ಗಡಿಮನೆ, ಕಟ್ಟೆಮನೆ, ಕಸಬಾ ಮನೆ ಯಜಮಾನರು ಹಾಗೂ ಗ್ರಾಮಾಂತರ ಯಜಮಾನರುಗಳು ಹಾಜರಿದ್ದರು.

weed for creativity edibles inspiration boost