ಬೆಂಗಳೂರು-22: ದೀಪಾವಳಿ ಸಂಭ್ರಮದ ವೇಳೆ ಪಟಾಕಿ ಸಿಡಿತದಿಂದ ಸಂಭವಿಸಿದ ಗಾಯಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ, ಪ್ರತೀ ವರ್ಷದಂತೆ ಈ ಬಾರಿಯೂ ಗಾಯಗೊಂಡವರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪಟಾಕಿ ಸಿಡಿತದಿಂದ ಗಾಯಗೊಂಲು ಮಿಂಟೋ ನೇತ್ರ ಆಸ್ಪತ್ರೆಗೆ ಸೋಮವಾರ 16 ಜನರು ಚಿಕಿತ್ಸೆ ಪಡೆದಿದ್ದಾರೆ. ಮಂಗಳವಾರ 4 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡ ಮೂವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ದೀಪಾವಳಿ ಹಬ್ಬದ ದಿನದ ರಾತ್ರಿ ಮತ್ತು ಮರುದಿನ ಆರು ಮಕ್ಕಳು, 10 ಮಂದಿ ವಯಸ್ಕರು ಸೇರಿದಂತೆ 16 ಪ್ರಕರಣಗಳಿಗೆ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದಾರೆ. ಕೆಲವರಿಗೆ ಹೊಲಿಗೆ ಹಾಕುವ ಅಗತ್ಯವಾಗಿತ್ತು. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. 12 ವರ್ಷದ ಬಾಲಕನ ಕಣ್ಣಿನ ಕಾರ್ನಿಯ ಸಂಪೂರ್ಣವಾಗಿ ಹಾನಿಗೊಳಾಗಿದ್ದು, ಆಂತರಿಕ ರಕ್ತಸ್ರಾವವಾಗಿತ್ತು. ದೇವಾಲಯದ ಬಳಿ ನಡೆದು ಹೋಗುತ್ತಿದ್ದ 34 ವರ್ಷದ ವ್ಯಕ್ತಿಯ ಕಣ್ಣಿಗೆ ತೀವ್ರ ಗಾಯವಾಗಿದ್ದು, ಅವರನ್ನು ನಿಕಟ ವೀಕ್ಷಣೆಯಲ್ಲಿ ಇರಿಸಲಾಗಿದೆ.
